ಸಿಎಂ, ಡಿಸಿಎಂ ಬದಲಾವಣೆ ಆದ್ರೆ ಲಿಂಗಾಯತರಿಗೆ ಆದ್ಯತೆ ನೀಡಿ: ಶ್ರೀಶೈಲ ಜಗದ್ಗುರು ಪಟ್ಟು

ಸಿಎಂ ಬದಲಾವಣೆ ಆದ್ರೆ , ಲಿಂಗಾಯತರಿಗೆ ಅವಕಾಶ ನೀಡುವಂತೆ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶ್ರೀ ಆಗ್ರಹಿಸಿದ್ದಾರೆ.
 

First Published Jun 28, 2024, 4:08 PM IST | Last Updated Jun 28, 2024, 4:08 PM IST

ರಾಜ್ಯದಲ್ಲಿ ಸಿಎಂ ಬದಲಾವಣೆ (CM change) ದಂಗಲ್ ಜೋರಾಗಿದೆ. ಒಕ್ಕಲಿಗ ಸ್ವಾಮೀಜಿ ನಂತರ ಇದೀಗ ಲಿಂಗಾಯತ (Lingayats) ಸ್ವಾಮೀಜಿ ಸರದಿ. ಸಿಎಂ ಬದಲಾವಣೆ ಆದ್ರೆ , ಲಿಂಗಾಯತರಿಗೆ ಅವಕಾಶ ಕೊಡುವಂತೆ ಶ್ರೀಶೈಲ ಜಗದ್ಗುರು( Srishaila Jagadguru Channasiddrama Shri) ಪಟ್ಟು ಹಿಡಿದಿದ್ದಾರೆ. ಸಿಎಂ, ಡಿಸಿಎಂ ಬದಲಾವಣೆ ಆದ್ರೆ ಲಿಂಗಾಯತರಿಗೆ ಆದ್ಯತೆ ನೀಡಿ, ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ್ದಾರೆ. ಎಂ.ಬಿ ಪಾಟೀಲ್ , ಈಶ್ವರ್ ಖಂಡ್ರೆ, ಎಸ್ಎಸ್ ಮಲ್ಲಿಕಾರ್ಜುನ್, ಶಾಮನೂರು ಪರ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀ ಬ್ಯಾಟಿಂಗ್ ಮಾಡಿದ್ದಾರೆ. ಸಮುದಾಯವಾರು ಡಿಸಿಎಂ ಬೇಡಿಕೆ ಬೆನ್ನಲ್ಲೇ ಜಾತಿ ಪರ ಲಾಬಿ ಶುರುವಾಗಿದೆ. ಜಾತಿವಾರು ಡಿಸಿಎಂಗಾಗಿ ಲಾಬಿಗಿಳಿದ ಸ್ವಾಮೀಜಿಗಳು, ಪಂಚ ಪೀಠದ ಜಗದ್ಗುರುಗಳ ಜತೆಯೂ ಲಿಂಗಾಯತ ಸಿಎಂ ಬಗ್ಗೆ ಚರ್ಚೆ ಶುರುವಾಗಿದೆ. ಚಿಕ್ಕೋಡಿಯ ಯಡೂರ ಗ್ರಾಮದಲ್ಲಿ ಶ್ರೀ ಶೈಲ ಜಗದ್ಗುರು ಚನ್ನಸಿದ್ದರಾಮ ಶ್ರೀ ಹೇಳಿಕೆ ನೀಡಿದ್ದಾರೆ. ಲಿಂಗಾಯತರನ್ನು ಕಡೆಗಣಿಸಿದರೆ ಒಳ್ಳೆ ಬೆಳವಣಿಗೆ ಆಗಲ್ಲ ಎಂದು ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶ್ರೀ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸ್ವಾಮೀಜಿ ಹೇಳಿಕೆ ವೈಯಕ್ತಿಕ, ಸಿಎಂ ಹುದ್ದೆ ಬಗ್ಗೆ ಚರ್ಚೆ ಈಗ ಅಪ್ರಸ್ತುತ: ಕೆ.ಎಚ್‌.ಮುನಿಯಪ್ಪ