ಸ್ವಾಮೀಜಿ ಹೇಳಿಕೆ ವೈಯಕ್ತಿಕ, ಸಿಎಂ ಹುದ್ದೆ ಬಗ್ಗೆ ಚರ್ಚೆ ಈಗ ಅಪ್ರಸ್ತುತ: ಕೆ.ಎಚ್.ಮುನಿಯಪ್ಪ
ಶಾಸಕರು, ಹೈಕಮಾಂಡ್ ತೀರ್ಮಾನಿಸಿ ಸಿಎಂ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ಈಗ ಅಪ್ರಸ್ತುತ ಎಂದು ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಕೆಂಪೇಗೌಡ ಜಯಂತಿ ವೇಳೆ ಚಂದ್ರಶೇಖರ್ ಸ್ವಾಮೀಜಿ (Chandrashekhar Swamiji) ಸಿಎಂ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯನ್ನು ಡಿಕೆ ಶಿವಕುಮಾರ್ ಅವರಿಗೆ ಬಿಟ್ಟು ಕೊಡಲಿ ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಸಚಿವ ಕೆ.ಎಚ್.ಮುನಿಯಪ್ಪ(Minister KH Muniyappa) ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಸ್ವಾಮೀಜಿ ಹೇಳಿಕೆ ವೈಯಕ್ತಿಕ. ಶಾಸಕರು, ಹೈಕಮಾಂಡ್ ತೀರ್ಮಾನಿಸಿ ಸಿಎಂ ಮಾಡಿದ್ದಾರೆ. ಮುಖ್ಯಮಂತ್ರಿ ಹುದ್ದೆ(Chief Minister post ) ಬಗ್ಗೆ ಚರ್ಚೆ ಈಗ ಅಪ್ರಸ್ತುತ. ಸಿಎಂ, ಡಿಸಿಎಂ ಹುದ್ದೆಗೆ ಡಿಮ್ಯಾಂಡ್ ಇದೆ. ಹೈಕಮಾಂಡ್ ಮುಂದೆ ಅಭಿಪ್ರಾಯ ತಿಳಿಸಬೇಕು. ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ದೆಹಲಿಯಲ್ಲಿ ಸಚಿವ ಕೆ.ಎಚ್ ಮುನಿಯಪ್ಪ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಟ್ ಕಾಯಿನ್ ಹಗರಣ: ಡಿವೈಎಸ್‌ಪಿ ಶ್ರೀಧರ್ ಪೂಜಾರ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್