Asianet Suvarna News Asianet Suvarna News

ಶ್ರೀರಾಮಸೇನೆಯಿಂದ ಸಿದ್ದರಾಮಯ್ಯಗೆ ಸಾವರ್ಕರ್‌ ಪುಸ್ತಕ ಕಳುಹಿಸಲು ನಿರ್ಧಾರ

ಸಿದ್ದರಾಮಯ್ಯಗೆ ಉಚಿತವಾಗಿ ಸಾವರ್ಕರ್‌ ಪುಸ್ತಕವನ್ನ ಕಳುಹಿಸುತ್ತೇವೆ, ಸಮಯ ತೆಗೆದುಕೊಂಡು ಚರಿತ್ರೆ ಓದಲಿ:  ಶ್ರೀರಾಮಸೇನೆ ಮುಖಂಡ ಅಜಿತ್‌ ಕುಮಾರ್‌

First Published Aug 21, 2022, 12:29 PM IST | Last Updated Aug 21, 2022, 1:26 PM IST

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್

ವಿಜಯಪುರ(ಆ.21):ಶಿವಮೊಗ್ಗದಲ್ಲಿ ಸಾವರ್ಕರ್‌ ಬ್ಯಾನರ್‌ ತೆರವುಗೊಳಿಸಿದ ಬೆನ್ನಲ್ಲೆ ಹಿಂದೂ ಸಂಘಟನೆಗಳು ಸಾವರ್ಕರ್‌ ಪರ ಅಭಿಯಾನವನ್ನೆ ಶುರು ಮಾಡಿವೆ. ಇದರ ಮುಂದುವರೆದ ಭಾಗವಾಗಿ ವಿಜಯಪುರದಲ್ಲೂ ಸಾರ್ವಕರ್‌ ಪರ ಶ್ರೀರಾಮಸೇನೆ ಕಾರ್ಯಕರ್ತರು ಗಣೇಶೋತ್ಸವದಲ್ಲಿ ಸಾವರ್ಕರ್‌ ಫೋಟೋ ಪ್ರದರ್ಶನಕ್ಕೆ ಅಭಿಯಾನ ಶುರು ಮಾಡಿದೆ. ಅಲ್ಲದೆ ಸಾವರ್ಕರ್‌ ವಿಚಾರದಲ್ಲಿ ವಿರುದ್ಧ ಹೇಳಿಕೆ ನೀಡ್ತಿರೋ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯಗೆ ಸಾವರ್ಕರ್‌ ಪುಸ್ತಕ ಕಳಿಸಲು ನಿರ್ಧಾರ

ಮಾಜಿ ಸಿಎಂ ಸಿದ್ದರಾಮಯ್ಯ ವೀರ್‌ ಸಾವರ್ಕರ್‌ ವಿಚಾರದಲ್ಲಿ ವಿರುದ್ಧ ಹೇಳಿಕೆಗಳನ್ನ ನೀಡುತ್ತ ಬರ್ತಿರೋದಕ್ಕೆ ಶ್ರೀರಾಮ ಸೇನೆ ಕಾರ್ಯಕರ್ತರು ಆಕ್ರೋಶ ಹೊರಹಾಕ್ತಿದ್ದಾರೆ. ಈಗ ವಿಜಯಪುರದಲ್ಲಿ ಸಂಘಟನೆ ಕಾರ್ಯಕರ್ತರು ವಿಭಿನ್ನ ರೀತಿಯಲ್ಲಿ ಪ್ರತಿಭಟಿಸೋದಕ್ಕೆ ಮುಂದಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಸಾವರ್ಕರ್‌ ಅವರ ಚರಿತ್ರೆಯುಳ್ಳ ಪುಸ್ತಕಗಳನ್ನ ಕಳಿಸೋದಕ್ಕೆ ನಿರ್ಧರಿಸಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆಗೆ ಮಾತನಾಡಿದ ಶ್ರೀರಾಮ ಸೇನೆ ಯುವ ಮುಖಂಡ ಅಜೀತ್‌ಕುಮಾರ್‌ ಮಾತನಾಡಿ ಸಿದ್ದರಾಮಯ್ಯನವರು ಸಾವರ್ಕರ್‌ ಬಗ್ಗೆ ಮೊದಲು ತಿಳಿದುಕೊಳ್ಳಲಿ. ಬಳಿಕ ಮಾತನಾಡಲಿ. ನಾವು ವೀರ್‌ ಸಾವಕರ್‌ ಚರಿತ್ರೆ ಕಳುಹಿಸಿಕೊಡುತ್ತೇವೆ ಅದನ್ನ ಅಧ್ಯಯನ ಮಾಡಿ ಮಾತನಾಡಲಿ ಎಂದಿದ್ದಾರೆ.

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಈಗ ನಾಗರಿಕರ ಒಕ್ಕೂಟ Vs ಗಣೇಶೋತ್ಸವ ಸಮಿತಿ ಫೈಟ್‌

ಗಣೇಶ ಮಂಟಪಗಳಲ್ಲಿ ಸಾರ್ವಕರ್‌ ಫೋಟೋ  

ಗಣೇಶ ಉತ್ಸವಕ್ಕೆ ಕೆಲವೆ ದಿನಗಳು ಭಾಕಿ ಇವೆ. ವಿಜಯಪುರದಲ್ಲಿ ಸುಮಾರು 9 ದಿನಗಳ ಕಾಲ ಅದ್ದೂರಿಯಾಗಿ ಗಣೇಶ ಉತ್ಸವ ನಡೆಯುತ್ತೇವೆ. ನಗರದಲ್ಲೆ 250ಕ್ಕು ಅಧಿಕ ಗಣೇಶ ಮೂರ್ತಿಗಳ ಪ್ರತಿಷ್ಟಾಪನೆಯಾಗಲಿದೆ. ಗಣೇಶ ಪ್ರತಿಷ್ಟಾಪನೆಯಾಗುವ ಎಲ್ಲ ಮಂಟಪಗಳಲ್ಲು ಸಾರ್ವಕರ್‌ ಪೋಟೋ ಅಳವಡಿಕೆಗೆ ಶ್ರೀರಾಮ ಸೇನೆ ರೆಡಿಯಾಗಿದೆ. ತಾವೇ ಸಾರ್ವಕರ್‌ ಪೋಟೊಗಳನ್ನ ಪ್ರೀಂಟ್‌ ಹಾಕಿ ಗಣೇಶ ಮಂಟಪಗಳಿಗೆ ವಿತರಿಸೋದಾಗಿ ಸಂಘಟನೆ ಮುಖಂಡರು ಹೇಳಿಕೊಂಡಿದ್ದಾರೆ.

ಸಾವರ್ಕರ್‌ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ

ಗಣೇಶ ಮೂರ್ತಿಗಳನ್ನ ಪ್ರತಿಷ್ಟಾಪಿಸೋ ಪೆಂಡಾಲ್‌ ಗಳಲ್ಲಿ ಸಾವರ್ಕರ್‌ ಪೋಟೊ ಅಳವಡಿಕೆ ಜೊತೆ ಜೊತೆಗೆ ಅವರ ಜೀವನ ಚರಿತ್ರೆ, ಹೋರಾಟದ ಬಗ್ಗೆ ಸಂದೇಶ ಸಾರುವ ಸಾಕ್ಷಿಚಿತ್ರಗಳನ್ನ ಪ್ರದರ್ಶನ ಮಾಡುವುದಾಗಿಯು ಶ್ರೀರಾಮ ಸೇನೆ ಸಂಘಟನೆಯ ಮುಖಂಡರ ನೀಲಕಂಠ ಕಂದಗಲ್‌ ಹೇಳಿದ್ದಾರೆ. ಗಣೇಶ ಉತ್ಸವದ ಉದ್ದಕ್ಕು ಜನರಿಗೆ ಸಾವರ್ಕರ್‌ ಜೀವನ ಚರಿತ್ರೆಯನ್ನ ತಲುಪಿಸುವ ಕೆಲಸ ಮಾಡ್ತೇವೆ ಎಂದಿದ್ದಾರೆ.

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ನಾಗರಿಕರ ಒಕ್ಕೂಟದ ಸದಸ್ಯರ ಮೇಲೆ ಕೇಸ್‌?

ಸಾವರ್ಕರ್‌ ರನ್ನ ಮನೆ ಮನೆಗೂ ಮುಟ್ಟಿಸುತ್ತೇವೆ

ಸಾವರ್ಕರ್‌ ಅವರ ಜೀವನ, ಹೋರಾಟದ ಬಗ್ಗೆ ಹಗುರವಾಗಿ ಮಾತನಾಡ್ತಿರೋ ಕಾಂಗ್ರೆಸ್‌ ಪಕ್ಷ, ಕಾಂಗ್ರೆಸ್‌ ನಾಯಕರಿಗೆ ಗಣೇಶ ಉತ್ಸವದಲ್ಲಿ ಸಾವರ್ಕರ್‌ ಉತ್ಸವ ಮಾಡುವ ಮೂಲಕ ಪಾಠ ಮಾಡಲಿದ್ದೇವೆ ಎಂದು ಶ್ರೀರಾಮ ಸೇನೆ ಮುಖಂಡರು ಹೇಳಿಕೊಂಡಿದ್ದಾರೆ. ಇಡೀ ಗಣೇಶೋತ್ಸವದಲ್ಲಿ ಸಾರ್ವಕರ್‌ ರನ್ನ ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡಲಿದ್ದೇವೆ ಎಂದಿದ್ದಾರೆ..

ಗ್ರಾಮೀಣ ಭಾಗಗಳಲ್ಲೂ ಸಾವರ್ಕರ್‌ ಕಿಚ್ಚು

ಇನ್ನು ವಿಜಯಪುರ ಗ್ರಾಮೀಣ ಭಾಗಗಳಲ್ಲು ವೀರ್‌ ಸಾವರ್ಕರ್‌ ಕಿಚ್ಚು ಹರಡುತ್ತಿದೆ. ಹಳ್ಳಿಗಳಲ್ಲು ಗಣೇಶ ಕೂರಿಸುವ ಸ್ಥಳಗಳಲ್ಲಿ ಸಾವರ್ಕರ್‌ ಭಾವಚಿತ್ರ, ಜೀವನ ಚರಿತ್ರೆ ಸಂದೇಶ ಅಳವಡಿಕೆ ಮಾಡಲು ನಿರ್ಧರಿಸಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗಕ್ಕು ಸಾವರ್ಕರ್‌ ಕಿಚ್ಚು ಶುರುವಾಗಿದೆ..

Video Top Stories