ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ನಾಗರಿಕರ ಒಕ್ಕೂಟದ ಸದಸ್ಯರ ಮೇಲೆ ಕೇಸ್‌?

ಪೊಲೀಸ್‌ ಪವರ್‌ ಬಳಸಿ ಗಣೇಶೋತ್ಸವ ಹತ್ತಿಕ್ಕಲು ಸರ್ಕಾರ ಮುಂದಾಗಿದೆಯಾ?, ಗಣೇಶೋತ್ಸವ ಆಚರಣೆ ಬಗ್ಗೆ  ಅಡ್ಡಗೋಡೆ ಮೇಲೆ ದೀಪ ಇಟ್ಟ ಸಚಿವರು

First Published Aug 21, 2022, 10:32 AM IST | Last Updated Aug 21, 2022, 10:31 AM IST

ಬೆಂಗಳೂರು(ಆ.21):  ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ನಾಗರಿಕರ ಒಕ್ಕೂಟ ಹಾಗೂ ಗಣೇಶೋತ್ಸವ ಸಮಿತಿ ಮಧ್ಯೆ ಜಟಾಪಟಿ ನಡೆಯುತ್ತಿದೆ. ಈದ್ಗಾ ಮೈದಾನದಲ್ಲಿ ಗಣೇಶನನ್ನ ಕೂರಿಸುವವರು ಯಾರು? ಎಂಬ ಪ್ರಶ್ನೆಗಳು ಎದ್ದಿವೆ. ಪೊಲೀಸ್‌ ಪವರ್‌ ಬಳಸಿ ಗಣೇಶೋತ್ಸವ ಹತ್ತಿಕ್ಕಲು ಸರ್ಕಾರ ಮುಂದಾಗಿದೆಯಾ?, ಗಣೇಶೋತ್ಸವ ಆಚರಣೆ ಬಗ್ಗೆ ಸಚಿವರು ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ. ನಾಗರಿಕ ವೇದಿಕೆ ರಾಜಣ್ಣ, ಶಶಾಂಕ್‌ ಸೇರಿದಂತೆ ಹಲವರನ್ನ ಪೊಲೀಸರು ಠಾಣೆಗೆ ಕರೆದಿದ್ದಾರೆ. ಐಪಿಸಿ ಸೆಕ್ಷನ್ 107 ಅಡಿಯಲ್ಲಿ ಕೇಸ್‌ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. 

ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಈಗ ನಾಗರಿಕರ ಒಕ್ಕೂಟ Vs ಗಣೇಶೋತ್ಸವ ಸಮಿತಿ ಫೈಟ್‌