6ನೇ ಬಾರಿ ಒಡಿಶಾದಲ್ಲಿ ಅಧಿಕಾರ ಹಿಡೀತಾರಾ ಪಟ್ನಾಯಕ್‌? ಬಿಜೆಪಿ-ಬಿಜೆಡಿ ಮಧ್ಯೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿ!

ಒಡಿಶಾದಲ್ಲಿ ಪಟ್ನಾಯಕ್ ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಬಿಜೆಪಿ ಮತ್ತು ಬಿಜೆಡಿ ಮಧ್ಯೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ.
 

First Published Jun 3, 2024, 10:46 AM IST | Last Updated Jun 3, 2024, 10:47 AM IST

ಒಡಿಶಾದಲ್ಲಿ ಬಿಜೆಪಿ(BJP) ಹಾಗೂ ಬಿಜೆಡಿ(BJD) ಸಮಬಲದ ಸ್ಪರ್ಧೆಯಲ್ಲಿದ್ದು, ಎರಡೂ ಪಕ್ಷಗಳಿಗೆ ತಲಾ 62 ರಿಂದ 80 ಬರಬಹುದು ಎಂದು ‘ಇಂಡಿಯಾ ಟುಡೇ-ಆಕ್ಸಿಸ್ ಮೈ ಇಂಡಿಯಾ’ ಚುನಾವಣೋತ್ತರ ಸಮೀಕ್ಷೆ ಹೇಳಿದೆ. 6ನೇ ಬಾರಿ ಒಡಿಶಾದಲ್ಲಿ(Odisha) ಪಟ್ನಾಯಕ್( Naveen Patnaik) ಅಧಿಕಾರ ಹಿಡಿಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಬಿಜೆಪಿ ಮತ್ತು ಬಿಜೆಡಿ ಮಧ್ಯೆ ಅಧಿಕಾರಕ್ಕಾಗಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿಗೆ 62 ರಿಂದ 80 ಸ್ಥಾನ, ಬಿಜೆಡಿಗೆ 62 ರಿಂದ 80 ಸ್ಥಾನ ಎಂದು ಸಮೀಕ್ಷೆ ಹೇಳಿದೆ. ಇನ್ನೂ ಕಾಂಗ್ರೆಸ್‌ಗೆ 5ರಿಂದ 8 ಸ್ಥಾನ ದೊರೆಯಬಹುದು ಎಂದು ಹೇಳಲಾಗ್ತಿದೆ. ಒಡಿಶಾದಲ್ಲಿ ಹಳೆ ದೋಸ್ತಿಗಳ ನಡುವೆ ಟಫ್‌ ಫೈಟ್‌ ನಡೆಯುತ್ತಿದೆ. 

ಇದನ್ನೂ ವೀಕ್ಷಿಸಿ:  ಕರ್ನಾಟಕದಲ್ಲಿ 'ದೋಸ್ತಿ'ಗೆ ಜೈ ಅಂದ್ರಾ ಮತದಾರ ? ಮೋದಿ ಗ್ಯಾರಂಟಿನಾ? ಕಾಂಗ್ರೆಸ್‌ ಗ್ಯಾರಂಟಿನಾ?