ಕಾವೇರಿ ಒಡಲು ಭರ್ತಿಗೆ ದೇವರ ಮೊರೆ ಹೋದ ನಿಗಮ: ಮಳೆಗಾಗಿ ಕೆಆರ್‌ಎಸ್‌ನಲ್ಲಿ ವಿಶೇಷ ಪೂಜೆ

ಮಳೆ ಇಲ್ಲದ ಹಿನ್ನೆಲೆ ಕೆಆರ್‌ಎಸ್ ಡ್ಯಾಂ ಬರಿದಾಗಿದೆ. ಈ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಮಳೆಗಾಗಿ ವಿಶೇಷ ಪೂಜೆಯನ್ನು ಮಾಡಿಸುತ್ತಿದೆ.

Share this Video
  • FB
  • Linkdin
  • Whatsapp

ಕಾವೇರಿ ಜಲಾಯನ ಪ್ರದೇಶದಲ್ಲಿ ಮಳೆಯಾಗದ ಹಿನ್ನೆಲೆ ಕೆಆರ್‌ಎಸ್‌ನಲ್ಲಿ ವರುಣನಿಗಾಗಿ ವಿಶೇಷ ಹೋಮ ಹವನ ನಡೆಸಲಾಗುವುದು. ಗಂಗಾ ಪೂಜೆ ಸೇರಿದಂತೆ ವಿಶೇಷ ಪೂಜೆ ನಡೆಸಲು ಸಿದ್ಧತೆ ಮಾಡಲಾಗಿದೆ. ಎರಡು ವರ್ಷದ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾವೇರಿ ಒಡಲು ತುಂಬಲು ಪೂಜೆ ಮಾಡಿದ್ದರು. ಆಗ ಕೆಆರ್‌ಎಸ್‌ ಸಂಪೂರ್ಣ ಭರ್ತಿಯಾಗಿತ್ತು. ಈಗಾಗಲೇ ಮುಂಗಾರು ಆರಂಭವಾಗಬೇಕಿತ್ತು. ಆದ್ರೆ ಆಗಿಲ್ಲ. ಕಳೆದ ವರ್ಷ ಇದೇ ತಿಂಗಳಿನಲ್ಲಿ ನೀರು 103 ಅಡಿಗೂ ಹೆಚ್ಚಿತ್ತು. ಸ್ಥಳೀಯ ಶಾಸಕ ರಮೇಶ್‌ ಬಾಬು ನೇತೃತ್ವದಲ್ಲಿ ಪೂಜೆ ನಡೆಯಲಿದ್ದು, ಹಲವು ರೀತಿಯ ಪೂಜಾ ಕೈಂಕರ್ಯಗಳನ್ನು ಪುರೋಹಿತ ತಂಡ ನಡೆಸಲಿದೆ. ಕಾವೇರಿ ಪ್ರತಿಮೆ ಬಳಿ ಪೂಜೆ ನಡೆಯಲಿದೆ. 

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಭೀಕರ ಕೊಲೆ: ತಾಯಿಯನ್ನೇ ಕೊಂದು ಸೂಟ್‌ಕೇಸ್‌ನಲ್ಲಿ ಠಾಣೆಗೆ ತಂದ ಮಗಳು !

Related Video