ಕುಂದಾಪ್ರ ಕನ್ನಡ ಹಬ್ಬ: ಕಾಂತಾರದ ಲೇ..ಲೇ..ಹಾಡು ಹಾಡಿದ ಜಗದೀಶ್‌

ಬೆಂಗಳೂರು ಅತ್ತಿಗುಪ್ಪೆಯ ಬಂಟರ ಸಂಘದ ವತಿಯಿಂದ ಕುಂದಾಪ್ರ ಕನ್ನಡ ಹಬ್ಬ ಆಯೋಜಿಸಲಾಗಿದೆ. ಇಲ್ಲಿಗೆ ಆಗಮಿಸಿದ ಜಗದೀಶ್‌ ಕಾಂತಾರ ಸಿನಿಮಾದ ಲೇ..ಲೇ..ಹಾಡನ್ನು ಹಾಡಿದರು.
 

Share this Video
  • FB
  • Linkdin
  • Whatsapp

ರಾಜಧಾನಿಯಲ್ಲಿ ತಮ್ಮ ವೃತ್ತಿ ಬದುಕು ಅರಸಿ ಬಂದು ನೆಲೆಸಿರುವ ಕುಂದಗನ್ನಡಿಗರನ್ನು ಭಾಷೆ,ಸಂಸ್ಕೃತಿ, ಆಚರಣೆಗಳೊಂದಿಗೆ ಒಗ್ಗೂಡಿಸಬೇಕೆಂಬ ಉದ್ದೇಶದಿಂದ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಅತ್ತಿಗುಪ್ಪೆಯ ಬಂಟರ ಸಂಘದಲ್ಲಿ ಕುಂದಾಪ್ರ ಕನ್ನಡ ಹಬ್ಬ(Kundapra Kannada festival) ಆಯೋಜಿಸಲಾಗಿದೆ. ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಕುಂದಾಪುರದ ಜನ ಸೇರಿ ಕುಂದಾಪ್ರ ಹಬ್ಬವನ್ನು ಯಶಸ್ವಿಗೊಳಿಸಿದರು. ಕನ್ನಡದ ಚಲನಚಿತ್ರ ಕಲಾವಿದರಾದ ಉಪೇಂದ್ರ(Upendra), ರಿಷಬ್ ಶೆಟ್ಟಿ(Rishabh Shetty), ಪ್ರಮೋದ್ ಶೆಟ್ಟಿ, ರವಿ ಬಸ್ರೂರ್ ಮುಂತಾದ ಪ್ರಮುಖರು ಕಾರ್ಯಕ್ರಮಕ್ಕೆ ಆಗಮಿಸಿದ್ದು, ಕುಂದಾಪ್ರ ಕನ್ನಡ ಹಬ್ಬಕ್ಕೆ ಮೆರುಗು ಕೊಟ್ಟಿತು. ಅರೆಹೊಳೆ ಪ್ರತಿಷ್ಠಾನದವರು ನಡೆಸಿಕೊಟ್ಟ ಮಾರಣಕಟ್ಟೆಯ ಕುರಿತಾದ ಬಿಡುವನೇ ಬ್ರಹ್ಮಲಿಂಗ ನೃತ್ಯ ರೂಪಕಕ್ಕೆ ಬೆಂಗಳೂರಿನ ಕುಂದಗನ್ನಡಿಗರು ಫುಲ್ ಫಿದಾ ಆದ್ರು. ಕುಂದಾಪುರದ ಜಾನಪದ ಕಲಾಪ್ರಕಾರಗಳು, ಆಹಾರ ತಿನಿಸುಗಳು ಬೆಂಗಳೂರಿನ ಜನರಿಗೆ ಭರಪೂರ್ ಮನರಂಜನೆ ನೀಡಿತು. ಇನ್ನೂ ಇದೇ ವೇಳೆ ಕಾಂತಾರ ಸಿನಿಮಾದ ಲೇಲೇ ಹಾಡುಗಾರ ಜಗದೀಶ್ ಅವರು ಹಾಡನ್ನು ಹಾಡಿದರು.

ಇದನ್ನೂ ವೀಕ್ಷಿಸಿ: ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ನೀರುಪಾಲು: ದೃಶ್ಯ ಮೊಬೈಲ್‌ನಲ್ಲಿ ಸೆರೆ

Related Video