ಆಸ್ಪತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತನ ದರ್ಬಾರ್‌: ವೈದ್ಯರು, ನರ್ಸ್‌ಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ

ಜಯನಗರದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತ ರಮಾನಂದ್‌ ಸಾಗರ್‌ ದರ್ಬಾರ್‌ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯ ಜಯನಗರದ ರಾಜೀವ್‌ ಗಾಂಧಿ ಆಸ್ಪತ್ರೆ(Rajiv Gandhi Hospital) ಸಿಬ್ಬಂದಿಗೆ ಸಾಮಾಜಿಕ ಕಾರ್ಯಕರ್ತ ರಮಾನಂದ್‌ (Ramanand Sagar) ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಅವರ ಕಿರುಕುಳಕ್ಕೆ ಆಸ್ಪತ್ರೆ(Hospital) ಸಿಬ್ಬಂದಿ ಬೇಸತ್ತು ಹೋಗಿದ್ದಾರಂತೆ. ಈ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಇವರ ಮಾತನ್ನು ಕೇಳಲೇ ಬೇಕೆಂತೆ. ಒಂದು ವೇಳೆ ಮಾತನ್ನು ಕೇಳಲಿಲ್ಲ ಎಂದರೇ, ಎತ್ತಂಗಡಿ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂಬ ಆರೋಪ ಸಹ ಕೇಳಿಬಂದಿದೆ. ಇದರ ಜೊತೆಗೆ ಮಹಿಳಾ ನರ್ಸ್‌ಗಳು, ವೈದ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದನೆ ಸಹ ಮಾಡುತ್ತಾರಂತೆ. ಈ ಸಂಬಂಧ ಆರೋಗ್ಯ ಇಲಾಖೆ ಆಯುಕ್ತರಿಗೆ ದೂರನ್ನು ನೀಡಲಾಗಿದೆ. 

ಇದನ್ನೂ ವೀಕ್ಷಿಸಿ:  ದೆಹಲಿಗೆ ವರುಣನ ವಕ್ರದೃಷ್ಟಿ: ಜನತೆಗೆ ಮತ್ತೆ ಪ್ರವಾಹದ ಭೀತಿ..!

Related Video