Asianet Suvarna News Asianet Suvarna News

ಬಾಲಕನಿಗೆ 9 ಬಾರಿ ಹಾವು ಕಚ್ಚಿರೋದು ನಿಜನಾ..? ಖ್ಯಾತ ಉರಗ ತಜ್ಞರು, ವೈದ್ಯರು ಈ ಬಗ್ಗೆ ಹೇಳೋದೇನು..?

ಹಾವಿನ ದ್ವೇಷ 12 ವರುಷ ಅನ್ನೋ ಗಾದೆ ಮಾತು ನೀವ್ ಕೇಳೇ ಇರ್ತೀರಾ. ಆದ್ರೆ  ಇಲ್ಲೊಬ್ಬ 14 ವರ್ಷದ ಪೋರನಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ ಅನ್ನೋ ಸುದ್ದಿ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ. ಆದ್ರೆ ಈ ಬಾಲಕ ಪ್ರಜ್ವಲ್‌ಗೆ ಪದೇ ಪದೇ ಹಾವು ಕಚ್ಚುತ್ತಿರೋದು ನಿಜವೋ.. ಸುಳ್ಳೋ..? ಅನ್ನೋ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

ಪ್ರಜ್ವಲ್‌ಗೆ 9 ಬಾರಿ ಹಾವು ಕಚ್ಚಿದೆ ಎಂದು ಪೋಷಕರು ಹೇಳ್ತಿದ್ದಾರೆ. ಆದ್ರೆ ಪ್ರಜ್ವಲ್‌ಗೆ ಚಿಕಿತ್ಸೆ ನೀಡಿರುವ ಕಲಬುರಗಿ(Kalaburagi) ಜಿಮ್ಸ್‌ನ ವೈದ್ಯರು ಹೇಳೋದೇ ಬೇರೆ. ಬಾಲಕನಿಗೆ ಮೊದಲ ಬಾರಿ ಹಾವು(Snake) ಕಚ್ಚಿದ್ದು ನಿಜ, ಆಡ್ಮಿಟ್ ಆಗಿದ್ದಾಗ ಅಂತಹ ಲಕ್ಷಣಗಳು ಕಂಡಿದ್ದವು. ಆದ್ರೆ, ನಂತರ ಬಂದಾಗ ಹಾವು ಕಚ್ಚಿದ ಲಕ್ಷಣಗಳು ಗೋಚರಿಸಿರಲಿಲ್ಲ ಎನ್ನುತ್ತಿದ್ದಾರೆ ವೈದ್ಯರು. ಉರಗ ತಜ್ಞ ಸ್ನೇಕ್ ಶಾಮ್(Snake Sham) ಕೂಡ  ಹಾವಿನ ದ್ವೇಷ 12 ವರ್ಷ ಅನ್ನೋದನ್ನು ತಳ್ಳಿ ಹಾಕುತ್ತಿದ್ದಾರೆ. ಹಾವು ಅಂಜುಬುರಕ ಜೀವಿ, ಅದ್ರಲ್ಲೂ ಹಾವಿನ ಜ್ಞಾಪಕ ಶಕ್ತಿ ಕಡಿಮೆ. ದ್ವೇಷ ಇಟ್ಟುಕೊಂಡು ಹುಡುಕಿ ಕಚ್ಚುವ ಜಾಯಮಾನ ಹಾವುಗಳದ್ದು ಅಲ್ಲವೇ ಅಲ್ಲ ಅಂತಾರೆ ಮೈಸೂರಿನ ಪ್ರಸಿದ್ದ ಉರಗ ತಜ್ಞ ಸ್ನೇಕ ಶಾಮ್. ಬಾಲಕನ ಕುಟುಂಬ ಮಾತ್ರ ಹಾವಿನ ಗುಂಗಿನಿಂದ ಹೊರ ಬಂದಿಲ್ಲ. ತಮ್ಮ ಹೊಲದಲ್ಲಿನ ತಾಯಮ್ಮ ಕಾಡುತ್ತಿದ್ದಾಳೆ ಅಂತ ಯಾರೋ ಹೇಳಿದ್ದಕ್ಕೆ ತಾಯಮ್ಮನ ಗುಡಿಯನ್ನೇ ನಿರ್ಮಿಸಿದ್ದಾರೆ. ತಾಯಮ್ಮ ಗುಡಿ ಕಟ್ಟಿಸಿದ ಮರು ದಿನವೇ 9 ನೇ ಬಾರಿ ಹಾವು ಕಚ್ಚಿದಿಯಂತೆ. ಪ್ರಜ್ವಲ್ ಪೋಷಕರು ಸಿಕ್ಕ ಸಿಕ್ಕ ದೇಗುಲಗಳಿಗೆ ಭೇಟಿ ನೀಡಿ ಪೂಜೆ ಮಾಡುತ್ತಿದ್ದಾರೆ. ನಾಗ ದೋಷ ಸರಿಹೋಗಲೆಂದು ಬೇಡಿಕೊಳ್ಳುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !

Video Top Stories