ಪ್ರತಿಭಟನೆ ಮಧ್ಯೆಯೂ ಹರಿಯುತ್ತಿರುವ ಕಾವೇರಿ: ಸುಪ್ರೀಂ ಅಂಗಳದಲ್ಲಿ ‘ಕಾವೇರಿ’ ಭವಿಷ್ಯ !
ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ. ನೀರು ಇಲ್ಲದಿದ್ರೂ ಕೆಆರ್‌ಎಸ್‌ನಿಂದ ಪ್ರತಿನಿತ್ಯ ತಮಿಳುನಾಡಿಗೆ ಸರ್ಕಾರ ನೀಡು ಬಿಡುತ್ತಿದೆ. ಸರ್ಕಾರದ ನಿರ್ಧಾರಕ್ಕೆ ಅನ್ನದಾತರು ಸಿಟ್ಟು ಹೊರಹಾಕಿದ್ದಾರೆ. ಇತ್ತ ಸುಪ್ರೀಂ ಅಂಗಳದಲ್ಲಿ ಕಾವೇರಿ ಭವಿಷ್ಯ ನಿರ್ಧಾರವಾಗಲಿದೆ.
ಒಂದು ಕಡೆ ರೈತರ ಆಕ್ರೋಶದ ಕಿಚ್ಚು, ಮತ್ತೊಂದಡೆ ಕಾವೇರಿ ನದಿಗೆ ಇಳಿದು ಅರೆಬೆತ್ತಲೆ ಪ್ರೊಟೆಸ್ಟ್, ಅನ್ಯಾಯ ಅನ್ಯಾಯ ಎಂಬ ಘೋಷಣೆ ಮಧ್ಯೆ ಕಾವೇರಿ ನಮ್ಮದು ಎಂದು ರೈತರ ಪ್ರಮಾಣ. ಇದು ಕಾವೇರಿ ಕೊಳ್ಳದಲ್ಲಿ ಭುಗಿಲೆದ್ದ ಕಾವೇರಿ(Cauvery) ಕಿಚ್ಚು. ಕೆಆರ್‌ಎಸ್‌ನಲ್ಲಿ ನೀರಿಲ್ಲ. ಸಂಕಷ್ಟದ ನಡುವೆಯೂ ಕಾವೇರಿ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ(Tamilnadu) ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಸರ್ಕಾರದ ಈ ನಡೆಯಿಂದ ಸಿಟ್ಟಿಗೆದ್ದ ರೈತರು ಪ್ರತಿಭಟನೆಗೆ ಇಳಿದಿದ್ದಾರೆ. ಶ್ರೀರಂಗಪಟ್ಟಣದ ಬಳಿ ನೀರಿಗೆ ಇಳಿದು ರೈತರು ಕಾವೇರಿ ನಮ್ಮವಳು ಎಂದು ಘೋಷಣೆ ಕೂಗಿದ್ರು. K.R.S ಎದುರು ಶಾಸಕ ದರ್ಶನ್ ಪುಟ್ಟಣಯ್ಯ (Darshan Puttanaiah) ನೇತೃತ್ವದಲ್ಲೂ ಅಹೋರಾತ್ರಿ ಧರಣಿ ನಡೆಯುತ್ತಿದೆ. ಇನ್ನು ಮಂಡ್ಯ(Mandya) ನಗರದಲ್ಲೂ ರೈತರು ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಬಳಿಕ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ರು. ರೈತ ಪರ, ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಕಾವೇರಿ ಕಹಳೆ ಮೊಳಗಿಸಿದ್ರು. ಕರುನಾಡಲ್ಲಿ ಕಾವೇರಿ ಕಿಚ್ಚು ಹೆಚ್ಚಾಗುತ್ತಿದ್ರೆ. ಇತ್ತ ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿನಿತ್ಯ ತಮಿಳುನಾಡಿಗೆ K.R.S ನಿಂದ 5 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಈ ಮಧ್ಯೆ ಸುಪ್ರೀಂಕೋರ್ಟ್‌ನಲ್ಲಿ ಜಲ ವಿವಾದದ ಅರ್ಜಿ ವಿಚಾರಣೆಗೆ ಬರಲಿದೆ.
ಇದನ್ನೂ ವೀಕ್ಷಿಸಿ: 16 ವರ್ಷ ಸಾರ್ಥಕ ಸೇವೆ: ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳ ಕಣ್ಣೀರ ಬೀಳ್ಕೊಡುಗೆ