Asianet Suvarna News Asianet Suvarna News

ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು ವಿಚಾರ: ಸಿಎಂ, ಡಿಸಿಎಂ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್‌

ಸಿಎಂ, ಡಿಸಿಎಂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​
ಬಿಜೆಪಿ ವಿರುದ್ಧ ಭ್ರಷ್ಟಾಚಾರದ ರೇಟ್ ಕಾರ್ಡ್ ಪ್ರದರ್ಶನ
2023, ಮೇ 5ರಂದು  ಜಾಹೀರಾತು ನೀಡಿದ್ದ ಕಾಂಗ್ರೆಸ್
 

First Published Jun 1, 2024, 11:24 AM IST | Last Updated Jun 1, 2024, 11:25 AM IST

ಕಾಂಗ್ರೆಸ್ (Congress)ವಿರುದ್ಧ ಬಿಜೆಪಿ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ(Defamation Case)ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ(Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್‌ಗೆ(DK Shivakumar) ವಿಚಾರಣೆಗೆ ಹಾಜರಾಗುವಂತೆ ಜನಪ್ರತಿನಿಧಿಗಳ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಬಿಜೆಪಿಯ(BJP) ಕೇಶವ್ ಪ್ರಸಾದ್ ಮೊಕದ್ದಮೆ ದಾಖಲಿಸಿದ್ರು. ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು ನೀಡಲಾಗಿತ್ತು. ಸಿಎಂ, ಡಿಸಿಎಂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್(Summons)​ ನೀಡಿದ್ದು, ಇಂದು ಕೋರ್ಟ್‌ಗೆ ಸಿಎಂ, ಡಿಸಿಎಂ ಹಾಜರಾಗಬೇಕಿದೆ. ಬಿಜೆಪಿ ವಿರುದ್ಧ ಭ್ರಷ್ಟಾಚಾರದ ರೇಟ್ ಕಾರ್ಡ್ ಪ್ರದರ್ಶನವನ್ನು ಮಾಡಿ, 2023, ಮೇ 5ರಂದು ಕಾಂಗ್ರೆಸ್‌  ಜಾಹೀರಾತು ನೀಡಿತ್ತು. 42ನೇ ಎಸಿಎಂಎಂ ಕೋರ್ಟ್​ ಮುಂದೆ ಸಿಎಂ , ಡಿಸಿಎಂ ಹಾಜರಾಗಬೇಕಿದೆ.

ಇದನ್ನೂ ವೀಕ್ಷಿಸಿ:  ಎಸ್ಐಟಿ ಅಧಿಕಾರಿಗಳ ವಿಚಾರಣೆ ಹೇಗಿರಲಿದೆ..? ಪ್ರಜ್ವಲ್‌ ರೇವಣ್ಣಗೆ ಎಸ್ಐಟಿ ಕೇಳುವ ಪ್ರಶ್ನೆಗಳೇನು ?