ಶತ್ರು ಭೈರವಿ ಯಾಗವನ್ನು ಅಘೋರಿಗಳು ಮಾತ್ರ ಮಾಡೋದಾ? ಡಿಕೆಶಿ ರಾಜಕೀಯ ಶತ್ರುಗಳಿಂದ ನಡೆಯುತ್ತಿದೆಯಾ ಯಾಗ?

ಸಿಎಂ,ಡಿಸಿಎಂ ಸರ್ವನಾಶಕ್ಕೆ ಕೇರಳದಲ್ಲಿ ಶತ್ರು ಭೈರವಿ ಯಾಗ..! 
ಶತ್ರು ಭೈರವಿ ಯಾಗ ಮಾಡಿಸಿದ್ರೆ ಶತ್ರುನಾಶವವಾಗೊದು ಪಕ್ಕಾನಾ? 
ಯಾಗ ಮಾಡಿಸುತ್ತಿರುವವರ ಬಗ್ಗೆ ತನಗೆಲ್ಲ ತಿಳಿದಿದೆ ಎಂದ ಡಿಕೆಶಿ

Share this Video
  • FB
  • Linkdin
  • Whatsapp


ರಾಜ್ಯ ರಾಜಕಾರಣದಲ್ಲಿ ಮತ್ತೆ ಮಾಟ-ಮಂತ್ರದ ಭಯಾನಕ ಸುದ್ದಿ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಅವರಿಗೆ ರಾಜಕಂಟಕ ತರುವ ಉದ್ದೇಶದಿಂದ ಕೇರಳದಲ್ಲಿ(Karala) ಶತ್ರು ಭೈರವಿ ಸಂಹಾರ ಯಾಗ(Shatru Bhairavi Yaga)ನಡೆಯುತ್ತಿದೆಯಂತೆ. ಇದಕ್ಕಾಗಿ ಅಘೋರಿಗಳು ಕೇರಳಕ್ಕೆ ಬಂದಿದ್ದಾರಂತೆ. ಡಿಕೆ ಶಿವಕುಮಾರ್ ಕೊಟ್ಟ ಆ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಡಿಕೆಶಿ ಆ ಮಾತು ಹೇಳಿದಾಗಿನಿಂದ ರಾಜ್ಯ ರಾಜಕಾರಣದಲ್ಲಿ ಇಡೇ ದೊಡ್ಡ ಚೆರ್ಚಾ ವಿಷಯವಾಗಿದೆ. ಕೇರಳದಲ್ಲಿ ತಮ್ಮ ಮತ್ತು ಸಿಎಂ ಸಿದ್ದರಾಮಯ್ಯನವರ ಮೇಲೆ ದೊಡ್ಡ ಪ್ರಯೋಗ ನಡೆಯುತ್ತಿದೆ. ಈ ಪ್ರಯೋಗ ನಡೆಯುತ್ತಿರುವುದು ತಮ್ಮ ಶತ್ರುಗಳಿಂದ ಎಂದು ಡಿಕೆಶಿ ದೊಡ್ಡ ಬಾಂಬ್ವೊಂದನ್ನು ಸಿಡಿಸಿದ್ದರು. ಭೈರವಿ ಯಾಗವೆಂದ್ರೆ, ಭೈರವ ಮಂತ್ರವನ್ನು ಬಳಸಿ, ತನ್ನ ವೈರಿ ಅಥವಾ ಶತ್ರುಗಳನ್ನು ಸಂಹಾರ ಮಾಡಲಿ ಎಂಬ ಆಸೆಯಿಂದ ಮಾಡುವ ಯಾಗವನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಹೇಳಲಾಗುತ್ತೆ. ಈ ಯಾಗವನ್ನು ತಮ್ಮ ಶತ್ರು ಸತ್ತು ಹೋಗಲಿ, ಓಡಿ ಹೋಗಲಿ, ನಾಶವಾಗಲಿ, ಧ್ವಂಷವಾಗಲಿ, ಜೊತೆಗಿದ್ದವರೊಟ್ಟಿಗೆ ಬಡಿದಾಡಿಕೊಳ್ಳಲಿ, ಮನೆಯವರಿಂದ ದೂರವಾಗಲಿ, ಕಿತ್ತಾಡಿಕೊಳ್ಳಲಿ ಒಟ್ಟಾರೆ ಹೇಳಬೇಕೆಂದ್ರೆ ತಮ್ಮ ಶತ್ರುವಿನ ಸರ್ವನಾಶಕ್ಕಾಗಿ ಈ ಯಾಗವನ್ನು ಮಾಡಿಸಲಾಗುತ್ತದೆ. ಇದನ್ನೇ ಶತ್ರು ಭೈರವಿ ಸಂಹಾರ ಯಾಗವೆಂದು ಕರೆಯಲಾಗುತ್ತೆ.

ಇದನ್ನೂ ವೀಕ್ಷಿಸಿ: ಬಿಜೆಪಿ ವಿರುದ್ಧ 40% ಕಮಿಷನ್‌ ಆರೋಪ: ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಲಾಗುತ್ತಾ..?

Related Video