ಬಿಜೆಪಿ ವಿರುದ್ಧ 40% ಕಮಿಷನ್ ಆರೋಪ: ರಾಹುಲ್ ಗಾಂಧಿ ವಿರುದ್ಧ ವಾರಂಟ್ ಹೊರಡಿಸಲಾಗುತ್ತಾ..?
ವಿಚಾರಣೆ ಮುಗಿಸಿ ಕೋರ್ಟ್‌ನಿಂದ ಹೊರಬಂದ ಸಿಎಂ,ಡಿಸಿಎಂ
ಖುದ್ದು ಹಾಜರಾತಿ ಆಗಿದ್ರಿಂದ ಸಿಎಂ, ಡಿಸಿಎಂಗೆ ಜಾಮೀನು
ರಾಹುಲ್ ಗಾಂಧಿ ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಕೆ
ಬಿಜೆಪಿ ವಿರುದ್ಧ 40 % ಕಮಿಷನ್ ಜಾಹೀರಾತು ಆರೋಪ ಪ್ರಕರಣಕ್ಕೆ(40% commission advertisement case against BJP) ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ(Siddaramaiah) ಡಿಸಿಎಂಗೆ(DK Shivakumar) ಜಾಮೀನು ಮಂಜೂರು ಮಾಡಲಾಗಿದೆ. ಅಲ್ಲದೇ ಕೋರ್ಟ್‌ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಜರಾಗಿದ್ದಾರೆ. ಬೆಂಗಳೂರಿನ 42ನೇ ACMM ಕೋರ್ಟ್‌ನಿಂದ ಜಾಮೀನು ಮಂಜೂರು ಮಾಡಲಾಗಿದೆ. ರಾಹುಲ್ ಗಾಂಧಿ(Rahul Gandhi) ಹಾಜರಾತಿಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ರಾಹುಲ್ ಗಾಂಧಿ ಹಾಜರಾತಿ ವಿನಾಯಿತಿಗೆ ಬಿಜೆಪಿ(BJP) ಪರ ವಕೀಲ ವಿನೋದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಹಾಜರಾತಿ ಬಗ್ಗೆ ಮಧ್ಯಾಹ್ನ 3ಕ್ಕೆ ಆದೇಶ ನೀಡಲಾಗುವುದು. ಜನಪ್ರತಿನಿಧಿಗಳ ಕೊರ್ಟ್ ತೀರ್ಪು ಕಾಯ್ದಿರಿಸಿದೆ. ರಾಹುಲ್ ಗಾಂಧಿಗೆ ವಾರಂಟ್ ನೀಡುವಂತೆ ವಕೀಲ ವಿನೋದ್ ಮನವಿ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಸಿಎಂ ಪುತ್ರನಿಗೆ ಎಂಎಲ್‌ಸಿ ಟಿಕೆಟ್ ಫಿಕ್ಸ್! ನಮ್ಮ ತಂದೆ ಬಳಿ ಹೇಳಿ ಅನುದಾನ ಕೊಡಿಸ್ತೀನಿ ಎಂದ ಯತೀಂದ್ರ!