Pro Pakistan Slogan: ನಮ್ಮ ಭಾರತ ಮಾತೆ‌ ಮೇಲೆ ಆಣೆ ಮಾಡ್ತೀನಿ,ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲ: ಶಫಿ ನಾಸಿಪುಡಿ

ನಾನು ನಾಸೀರ್ ಸಾಬ್ ಜಿಂದಾಬಾದ್ ಎಂದು ಕೂಗಿದ್ದು
ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲವೆಂದು ಶಫಿ
ಬಿಜೆಪಿ ನಾಯಕರ ಆರೋಪ ಸುಳ್ಳು- ಶಫಿ ನಾಸಿಪುಡಿ

First Published Feb 29, 2024, 11:29 AM IST | Last Updated Feb 29, 2024, 11:29 AM IST

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್‌ ಸುವರ್ಣನ್ಯೂಸ್‌ಗೆ ಶಫಿ ನಾಸಿಪುಡಿ(Shafi Nasipudi) ಸ್ಪಷ್ಟನೆ ನೀಡಿದ್ದಾರೆ. ನಾನು ನಾಸೀರ್ ಸಾಬ್ ಜಿಂದಾಬಾದ್(Naseer Saab Zindabad) ಎಂದು ಕೂಗಿದ್ದು,  ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿಲ್ಲವೆಂದು ಹೇಳಿದ್ದಾರೆ. ಬಿಜೆಪಿ(BJP) ನಾಯಕರು ಮಾಡುತ್ತಿರುವ ಆರೋಪ ಸುಳ್ಳಾಗಿದೆ. ನಾವು ಮೊನ್ನೆ ನಾಸೀರ್ ಹುಸೇನ್(Naseer Hussain) ಜೊತೆ ಇದ್ದೆವು. ಪಾಕಿಸ್ತಾನ್ ಜಿಂದಾಬಾದ್(Pakistan Zindabad) ಎಂದು ಕೂಗಿಲ್ಲ. ಪಾಕ್ ಪರ ಯಾರು ಕೂಗಿದ್ದಾರೆ ನನಗೆ ಕೇಳಿಲ್ಲ. ಮೊನ್ನೆ ಸುಮಾರು 60 ರಿಂದ 100 ಜನ ಇದ್ರು. ನಾನು ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡ್ತೀನಿ. ನಮ್ಮ ಭಾರತ ಮಾತೆ‌ ಮೇಲೆ  ಆಣೆ ಮಾಡ್ತೀನಿ. ಬಿಜೆಪಿ ಏಕೆ ಆ ರೀತಿ ಆರೋಪ ಮಾಡಿದ್ರೋ ಗೊತ್ತಿಲ್ಲ ಎಂದು ಶಫಿ ನಾಸಿಪುಡಿ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

Video Top Stories