Naseer Hussain : ನಾಸೀರ್‌ ಹುಸೇನ್‌ ಪಾಸ್‌ ಸೀಕ್ರೆಟ್‌..! 25 ಜನರ ಪಟ್ಟಿ ಪತ್ರದೊಂದಿಗೆ ರವಾನೆ !

ಕಾಂಗ್ರೆಸ್ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ನಾಸೀರ್ ಹುಸೇನ್
ಹಿತೈಷಿಗಳು,ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ 
25 ಜನರ ಪಟ್ಟಿಯನ್ನು ಪತ್ರದೊಂದಿಗೆ ರವಾನಿಸಿದ್ದ ನಾಸಿರ್ ಹುಸೇನ್

Share this Video
  • FB
  • Linkdin
  • Whatsapp

ರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದ ಎಕ್ಸ್ಕ್ಲೂಸಿವ್ ಸುದ್ದಿಯೊಂದು ಹೊರಬಂದಿದ್ದು, ಚುನಾವಣೆಯಲ್ಲಿ ಗೆದ್ದ ನಾಸೀರ್ ಹುಸೇನ್‌ಗೆ ಸಂಬಂಧಿಸಿದ ರಿಪೋರ್ಟ್ ಇದಾಗಿದೆ. ಚುನಾವಣೆಯಂದು ಬೆಂಬಲಿಗರಿಗೆ ನಾಸೀರ್ ಹುಸೇನ್(Naseer Hussain) ಪಾಸ್ ಕೇಳಿದ್ದರು ಎಂದು ತಿಳಿದುಬಂದಿದೆ. ಇವರು ಕಾಂಗ್ರೆಸ್‌ನಿಂದ(Congress) ರಾಜ್ಯಸಭೆ ಚುನಾವಣೆಗೆ(Rajya Sabha) ಸ್ಪರ್ಧಿಸಿದ್ದರು. ಹಿತೈಷಿಗಳು, ಬೆಂಬಲಿಗರಿಗೆ ಪಾಸ್ ಕೊಡುವಂತೆ ಪತ್ರ ಬರೆದು ಮನವಿ ಮಾಡಿದ್ದರು. ಆಡಳಿತ ಸುಧಾರಣಾ ಇಲಾಖೆಯ ಜಂಟಿ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಫೆಬ್ರವರಿ 26ರಂದು ಪತ್ರ ಬರೆಯಲಾಗಿತ್ತು. 25 ಜನ ಬೆಂಬಲಿಗರಿಗೆ ಪಾಸ್ (Pass) ನೀಡುವಂತೆ ಪತ್ರದಲ್ಲಿ ಮನವಿ ಮಾಡಲಾಗಿತ್ತು. 25 ಜನರ ಪಟ್ಟಿಯನ್ನು ಪತ್ರದೊಂದಿಗೆ ನಾಸಿರ್ ಹುಸೇನ್‌ ರವಾನಿಸಿದ್ದರು. ಎಲ್ಲಾ 25 ಜನರ ಆಧಾರ್ ನಂಬರ್‌ಗಳು ಪತ್ರದಲ್ಲಿ ನಮೂದಾಗಿದ್ದು, 25 ಜನರ ವಿವರ ಒಳಗೊಂಡ ಪತ್ರ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. 

ಇದನ್ನೂ ವೀಕ್ಷಿಸಿ:  ಸಪ್ತಸಾಗರದಾಚೆಯೂ ಉತ್ತರ ಕರ್ನಾಟಕದ ಕಂಪು: ಟೆಕ್ಸಸ್‌ನ ಡಾಲಸ್‌ನಲ್ಲಿ ಕರ್ನಾಟಕದ ಪರಂಪರೆ ಜಾತ್ರಿ

Related Video