Asianet Suvarna News Asianet Suvarna News

ಕಾಳಿ ಹುಲಿ ಸಂರಕ್ಷಿತ ಪ್ರದೇಶ: ಕಾಡಂಚಿನ ಜನರಲ್ಲಿ ಜಾಗೃತಿ ಮೂಡಿಸಿದ ನಟ ರಿಷಬ್‌ ಶೆಟ್ಟಿ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ಹಾಗೂ ಅರಣ್ಯ ಇಲಾಖೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿತು.

ಕಾಳಿ ಹುಲಿ ಸಂರಕ್ಷಿತ ಪ್ರದೇಶ(kali tiger reserve) ಇದು ಉತ್ತರ ಕನ್ನಡ(Uttara kannada) ಜಿಲ್ಲೆಯ ಕಾರವಾರ, ಜೋಯಿಡಾ, ಹಳಿಯಾಳ ವ್ಯಾಪ್ತಿಯಲ್ಲಿ ಹಬ್ಬಿದೆ. ಈ ಅಭಯಾರಣ್ಯ ತೇವಾಂಶಯುಕ್ತ ಎಲೆಗಳು ಉದುರುವ ಕಾಡಿನ್ನು ಒಳಗೊಂಡಿದೆ. ಈ ಪ್ರದೇಶ ಅಪರೂಪದ ಉಭಯವಾಸಿಗಳಿಗೆ ಮತ್ತು ಸರಿಸೃಪಗಳಿಗೆ ಆಶ್ರಯ ತಾಣವಾಗಿದೆ. ಹುಲಿ(Tiger), ಚಿರತೆ, ಕಾಡು ಎಮ್ಮೆ, ಆನೆ ಇನ್ನೂ ಇತರ ಪ್ರಾಣಿಗಳು ಇಲ್ಲಿವೆ. ಪ್ರಾಣಿಗಳು ಮತ್ತು ಮನುಷ್ಯರ ಸಂಘರ್ಷವನ್ನು ತಡೆಯುವ ಸಲುವಾಗಿ, ಕಾಡಂಚಿನ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಕನ್ನಡಪ್ರಭ ಹಾಗೂ ಅರಣ್ಯ ಇಲಾಖೆ ಮತ್ತು ನಟ ರಿಷಬ್‌ ಶೆಟ್ಟಿ(Rishabh Shetty) ಮಾಡಿದರು. ದಾಂಡೇಲಿಯಲ್ಲಿರುವ ಹುಲಿ ಸಂರಕ್ಷಿತ ಪ್ರದೇಶವು 1300 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ ಮತ್ತು ಆ ಪ್ರದೇಶದ ಎರಡು ಪ್ರಮುಖ ಪ್ರದೇಶಗಳನ್ನು ಒಳಗೊಂಡಿದೆ.  

ಇದನ್ನೂ ವೀಕ್ಷಿಸಿ:  Today Horoscope: ಮಿಥುನ ರಾಶಿಯವರು ಬೆಂಕಿ ವಿಷಯದಲ್ಲಿ ಜಾಗ್ರತೆವಹಿಸಿ..ಶಿವನಿಗೆ ಕ್ಷೀರ ಸಮರ್ಪಣೆ ಮಾಡಿ

Video Top Stories