Asianet Suvarna News Asianet Suvarna News

Today Horoscope: ಮಿಥುನ ರಾಶಿಯವರು ಬೆಂಕಿ ವಿಷಯದಲ್ಲಿ ಜಾಗ್ರತೆವಹಿಸಿ..ಶಿವನಿಗೆ ಕ್ಷೀರ ಸಮರ್ಪಣೆ ಮಾಡಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಸೋಮವಾರ, ಏಕಾದಶಿ ತಿಥಿ, ಉತ್ತರಾಷಾಢ ನಕ್ಷತ್ರ.

ಈ ದಿನ ಹರಿ-ಹರರ ಪ್ರಾರ್ಥನೆ ಮಾಡುವುದರಿಂದ ಉತ್ತಮ ಫಲ ದೊರೆಯಲಿದೆ. ಮಿಥುನ ರಾಶಿಯವರಿಗೆ ಈ ದಿನ ಬೇಸರವಾಗುವ ಸಾಧ್ಯತೆ ಇದೆ. ಸ್ತ್ರೀಯರಲ್ಲಿ ಮನಸ್ತಾಪ ಬರಲಿದೆ. ಅಧಿಕ ವ್ಯಯವಾಗಲಿದೆ. ಆದ್ರೆ ಕೆಲಸದಲ್ಲಿ ಉತ್ತಮ ಫಲ ಸಿಗಲಿದ್ದು, ಸಹೋದರರ ಸಹಕಾರ ಇರಲಿದೆ. ಪ್ರಯಾಣ ಮಾಡುವಾಗ ಸ್ವಲ್ಪ ಎಚ್ಚರವಹಿಸಿ. ಬೆಂಕಿ ವಿಷಯದಲ್ಲಿ ಜಾಗ್ರತೆವಹಿಸಿ ಹಾಗೂ ಈಶ್ವರನಿಗೆ ಈ ದಿನ ಕ್ಷೀರ ಸಮರ್ಪಣೆ ಮಾಡಿ.

ಇದನ್ನೂ ವೀಕ್ಷಿಸಿ:  ಪ್ಲಾಸ್ಟಿಕ್‌ ವೆಜಿಟೇಬಲ್ ಕಟ್ಟಿಂಗ್ ಬೋರ್ಡ್‌, ತರಕಾರಿ ಹೆಚ್ಚಲು ಬಳಸಬಹುದಾ?