ಸಂವಿಧಾನ ಪುಸ್ತಕ ಅರವಿಂದ ಬೆಲ್ಲದ ಕಣ್ಣಿಗೆ ಬೈಬಲ್ ರೀತಿ ಕಾಣುತ್ತೆ ಅಂದ್ರೆ ಕಣ್ಣುಗಳ ತಪಾಸಣೆ ಮಾಡಿಸಬೇಕು: ಸಂತೋಷ ಲಾಡ್

ಅರವಿಂದ ಬೆಲ್ಲದ ಕಣ್ಣಿಗೆ ಸಂವಿಧಾನ ಪುಸ್ತಕ ಬೈಬಲ್ ರೀತಿ ಕಾಣುತ್ತೆ ಅಂದರೆ ಅವರ ಕಣ್ಣುಗಳನ್ನು ತಪಾಸಣೆ ಮಾಡಿಸಬೇಕು ಎಂದು ಧಾರವಾಡದಲ್ಲಿ ಸಂತೋಷ್‌ ಲಾಡ್‌ ಹೇಳಿದ್ದಾರೆ.

First Published Jun 24, 2024, 5:54 PM IST | Last Updated Jun 24, 2024, 5:53 PM IST

ರಾಹುಲ್ ಗಾಂಧಿ ಕೈಯಲ್ಲಿನ ಸಂವಿಧಾನ ಪುಸ್ತಕ(Constitution Book) ಬೈಬಲ್ ರೀತಿ ಕಾಣುತ್ತದೆ ಎಂಬ ಅರವಿಂದ ಬೆಲ್ಲದ(Aravinda Bellad) ಹೇಳಿಕೆಗೆ ಸಚಿವ ಸಂತೋಷ ಲಾಡ್(Santosh Lad) ತಿರುಗೇಟು ನೀಡಿದ್ದಾರೆ. ಧಾರವಾಡ(Dharwad) ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂವಿಧಾನ ಪುಸ್ತಕ, ಅರವಿಂದ ಬೆಲ್ಲದ ಕಣ್ಣಿಗೆ ಬೈಬಲ್ ರೀತಿ ಕಾಣುತ್ತೆ ಅಂದರೆ ಅವರ ಕಣ್ಣುಗಳನ್ನು ತಪಾಸಣೆ ಮಾಡಿಸಬೇಕು ಎಂದು ಕಿಡಿಕಾರಿದರು. ಬಿಜೆಪಿಯವರು ಜೂನ್ 25 ರಂದು ತುರ್ತು ಪರಿಸ್ಥಿತಿ ಹೇರಿದ ವಿರೋಧಿ ದಿನ ಆಚರಣೆ ಮಾಡಲು ಅಧಿಕಾರ ಇದೆ ಮಾಡಲಿ. ಅದರ ಜೊತೆಗೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಹೇಬರು ಸಂವಿಧಾನ ವಿರೋಧಿ ಚಟುವಟಿಕೆಯ ಕುರಿತು ಮಾತನಾಡುತ್ತಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರದಿಂದ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಎಂಬ ಆರೋಪ ಹೊಸದೇನಲ್ಲ, ಕೇಂದ್ರ ಸರ್ಕಾರ ಕಳೆದ 10 ವರ್ಷದಲ್ಲಿ ಎಷ್ಟು ಅನುದಾನ ನೀಡಿದೆ ಎಂಬುವುದನ್ನು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ ಅವರನ್ನು ಕೇಳಿ ಎಂದರು.

ಇದನ್ನೂ ವೀಕ್ಷಿಸಿ:  ನಟೋರಿಯಸ್ ರೌಡಿ ಭೇಟಿಗೆ ದುಂಬಾಲು ಬಿದ್ದ ದರ್ಶನ್! ನಟನಿಗೂ ರೌಡಿ ನಾಗನಿಗೂ ಇರುವ ಲಿಂಕ್‌ ಏನು?