Asianet Suvarna News Asianet Suvarna News

Mandya: 108 ಅಡಿ ಕೇಸರಿ ಬಣ್ಣದ ಧ್ವಜ ತೆರವು: ಕಾಂಗ್ರೆಸ್‌ ಶಾಸಕ ಗಣಿಗ ರವಿ ವಿರುದ್ಧ ಕಾರ್ಯಕರ್ತರ ಆಕ್ರೋಶ

ಮಂಡ್ಯದಲ್ಲಿ ಹಾಕಲಾಗಿದ್ದ 108 ಅಡಿ ಕೇಸರಿ ಬಣ್ಣದ ಹನುಮ ಧ್ವಜವನ್ನು ಪೊಲೀಸರ ಭದ್ರತೆಯಲ್ಲಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
 

ಮಂಡ್ಯ (Mandya) ತಾಲೂಕಿನ ಕೆರಗೋಡು ಹನುಮಧ್ವಜ ವಿವಾದ(Hanuman flag) ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮ ಧ್ವಜ ತೆರವಿಗೆ ಅಧಿಕಾರಿಗಳು ರಾತ್ರೋ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಸಿಡಿದೆದಿದ್ದಾರೆ. ಹನುಮ ಧ್ವಜ ತೆರವು ಮಾಡದಂತೆ ನೂರಾರು ಜನರು ಜಮಾಯಿಸಿದ್ದರು. ಹೀಗಿದ್ದರೂ ಪೊಲೀಸ್‌(Police) ಅಧಿಕಾರಿಗಳ ಭದ್ರತೆಯಲ್ಲಿ ಅಧಿಕಾರಿಗಳು ಧ್ವಜವನ್ನು ಇಳಿಸಿದ್ದಾರೆ. 108 ಅಡಿ ಕೇಸರಿ(saffron) ಬಣ್ಣದ ಧ್ವಜವನ್ನು ಇಳಿಸಲಾಗಿದೆ. ಧ್ವಜ ಇಳಿಸದಂತೆ ಪಟ್ಟು ಹಿಡಿದಿದ್ರೂ, ಅಧಿಕಾರಿಗಳ ಕೇಳದೇ ತೆರವುಗೊಳಿಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿದ್ದು, ಸ್ಥಳದಲ್ಲಿ ಲಾಠಿ ಜಾರ್ಜ್‌ ಮಾಡಲಾಗಿದೆ.

ಇದನ್ನೂ ವೀಕ್ಷಿಸಿ: Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ?

Video Top Stories