Weekly-Horoscope: ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ?

ಈ ವಾರದ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ವಾರದ ಭವಿಷ್ಯ ಹೇಗಿದೆ? ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ..

Share this Video
  • FB
  • Linkdin
  • Whatsapp

ಈ ವಾರದ ವಿಶೇಷ ನೋಡುವುದಾದ್ರೆ, ಜನವರಿ 30ರಂದು ಮಂಗಳವಾರ ತ್ಯಾಗರಾಜರ ಆರಾಧನೆ ಇದ್ದು, ಫೆಬ್ರವರಿ 01 ಗುರುವಾರ ಬುಧ ಮಕರ ರಾಶಿ ಪ್ರವೇಶ ಮಾಡಲಿದ್ದಾನೆ. ಮೇಷ ರಾಶಿಯವರಿಗೆ ವಾರದ ಆದಿಯಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಎದೆ ಭಾಗದಲ್ಲಿ ನೋವು, ಮಕ್ಕಳಿಂದ ಸಹಕಾರ, ಬುದ್ಧಿಬಲದಿಂದ ಕಾರ್ಯ ಸಾಧನೆ ಮಾಡುವಿರಿ. ವೃತಿಯಲ್ಲಿ ಅನುಕೂಲವಿದೆ. ವಾರ ಮಧ್ಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಚರ್ಮ-ಕಿವಿ ಸಂಬಂಧಿ ತೊಂದರೆ, ವೃತ್ತಿಯಲ್ಲಿ ಅನುಕೂಲ, ಸ್ತ್ರೀಯರಿಗೆ ಶತ್ರುಗಳ ಬಾಧೆ ಕಾಡಲಿದೆ. ವೈದ್ಯಕೀಯ ಕ್ಷೇತ್ರದವರಿಗೆ ಅನುಕೂಲವಿದೆ. ವಾರಾಂತ್ಯದಲ್ಲಿ ಲಾಭದ ದಿನ, ಸಂಗಾತಿಯ ಸಹಕಾರ , ವ್ಯಾಪಾರಿಗಳಿಗೆ ಉತ್ತಮ ಫಲ, ವೃತ್ತಿಯಲ್ಲಿ ನೈಪುಣ್ಯತೆ, ಹೆಚ್ಚಿನ ಅನುಕೂಲವಿದೆ. ಪರಿಹಾರಕ್ಕೆ ವಿಷ್ಣು ಸನ್ನಿಧಾನದಲ್ಲಿ ತುಳಸಿ ಅರ್ಚನೆ ಮಾಡಿಸಿ.

ಇದನ್ನೂ ವೀಕ್ಷಿಸಿ: News Hour: ಆರ್‌ಜೆಡಿ, ಜೆಡಿಯು ಮೈತ್ರಿ ಕಗ್ಗಂಟು.. ಬಿಹಾರ ಕಾಂಗ್ರೆಸ್‌ಗೆ ಕಾಡ್ತಿದ್ಯಾ ಆಪರೇಷನ್ ಕಮಲದ ಭಯ ?

Related Video