ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?

ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿಗೆ ಬದಲಿ ನಿವೇಶನ
ಜಮೀನಿದ್ದ ಬಡಾವಣೆಯಲ್ಲೇ ಸೈಟ್ ಇದ್ರೂ ಪಡೆಯದ ಸಿಎಂ
ದೇವನೂರು ಬಡಾವಣೆ 3ನೇ ಹಂತದಲ್ಲಿ ಸಿಎಂ ಪತ್ನಿ ಜಮೀನು

First Published Jul 14, 2024, 11:02 AM IST | Last Updated Jul 14, 2024, 11:02 AM IST

ಮುಡಾ ಹಗರಣದಲ್ಲಿ(Muda scam) ಸಿಎಂ ಸಿದ್ದರಾಮಯ್ಯ (Siddaramaiah) ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಚುನಾವಣಾ ಆಯೋಗಕ್ಕೆ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. ಚುನಾವಣಾ ಅಫಿಡವಿಟ್‌ನಲ್ಲಿ(Election Affidavit) ಜಮೀನಿನ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. 2010ರಲ್ಲಿ ಸಿದ್ದರಾಮಯ್ಯ ಪತ್ನಿಗೆ ಸಹೋದರನಿಂದ ಜಮೀನು ಸಿಕ್ಕಿದ್ದು, 2013ರ ಚುನಾವಣಾ ಅಫಿಡವಿಟ್‌ನಲ್ಲಿ ಮಾಹಿತಿ ಮುಚ್ಚಿಟ್ಟಿದ್ದಾರೆ ಎನ್ನಲಾಗ್ತಿದೆ. 2018ರ ಚುನಾವಣೆ ಅಫಿಡವಿಟ್‌ನಲ್ಲಿ ಜಮೀನಿನ ಬಗ್ಗೆ ಉಲ್ಲೇಖ ಮಾಡಲಾಗಿದೆ. 3.16 ಎಕರೆ ಜಮೀನು ತಮ್ಮ ಪತ್ನಿ ಹೆಸರಲ್ಲಿದೆ ಅಂತಾ ಮಾಹಿತಿ ನೀಡಿದ್ದು, ಜಮೀನಿನ ಮೌಲ್ಯ 25 ಲಕ್ಷ ಅಂತಾ ಸಿದ್ದರಾಮಯ್ಯ ಉಲ್ಲೇಖಿಸಿದ್ರು. 2023ರ ಚುನಾವಣಾ ಅಫಿಡವಿಟ್‌ನಲ್ಲಿ ಬದಲಿ ನಿವೇಶನಗಳ ಘೋಷಣೆ ಮಾಡಲಾಗಿದೆ. 25 ರೂ. ಲಕ್ಷದ ಜಮೀನಿಗೆ ಬದಲಿಯಾಗಿ ₹8 ಕೋಟಿ ಮೌಲ್ಯದ ನಿವೇಶನ, ಸಿಎಂ ಸಿದ್ದರಾಮಯ್ಯಗೆ RTI ಕಾರ್ಯಕರ್ತ ಗಂಗರಾಜು(RTI activist Gangaraju) ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಪತ್ನಿಗೆ ವಿಜಯನಗರದಲ್ಲಿ ಬದಲಿ ನಿವೇಶನ ನೀಡಿದ್ದು, ಮುಡಾದಿಂದ 37 ಸಾವಿರ ಚದರಡಿಗೂ ಹೆಚ್ಚು ಜಾಗ ಮಂಜೂರು ಮಾಡಲಾಗಿದೆ. ದೇವನೂರು ಬಡಾವಣೆಯಲ್ಲೇ ಖಾಲಿಯಿವೆ ಸಾಕಷ್ಟು ನಿವೇಶನ ಇವೆ. 4,538 ನಿವೇಶನಗಳ ಪೈಕಿ 565 ನಿವೇಶನಗಳು ಈಗಲೂ ಖಾಲಿ ಇವೆ. ಸಿದ್ದರಾಮಯ್ಯ ಪತ್ನಿ ನೀಡಿರುವ ಭೂಮಿಯಲ್ಲೇ 18 ಸೈಟ್ ಖಾಲಿ ಇದ್ದು, ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ?, ಉದ್ದೇಶಪೂರ್ವಕವಾಗಿಯೇ ವಿಜಯನಗರದಲ್ಲಿ ಸೈಟ್ ಪಡೆದ್ರಾ? ಸಿಎಂ ಸಿದ್ದರಾಮಯ್ಯಗೆ ಸೈಟ್ ಹಂಚಿಕೆ ಬಗ್ಗೆ ಇದೀಗ ಅನುಮಾನ ಹೆಚ್ಚಿದೆ.

ಇದನ್ನೂ ವೀಕ್ಷಿಸಿ:  ಇಡಿ ಬಲೆಗೆ ಬಿದ್ದಿರುವ ನಾಗೇಂದ್ರಗೆ ಮತ್ತಷ್ಟು ಸಂಕಷ್ಟ..! ಡೀಲ್‌ನಲ್ಲಿ ಕೈಜೋಡಿಸಿದ್ದವರೇ ಮಾಜಿ ಸಚಿವನಿಗೆ ಮುಳುವಾದ್ರಾ..?