Asianet Suvarna News Asianet Suvarna News

ಬಿ.ಕೆ. ಸಿಂಗ್ ನೇತೃತ್ವದಲ್ಲಿ ಸೂರಜ್ ರೇವಣ್ಣ ಪ್ರಕರಣದ ತನಿಖೆ: ಹೇಗಿರಲಿದೆ ಸಿಐಡಿ ತನಿಖೆ?

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದ ಫೈಲ್‌ನನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದ್ದು, ಬಿ.ಕೆ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ.

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ(Suraj Revanna sexual abuse case) ಅಧಿಕೃತವಾಗಿ ಸಿಐಡಿಗೆ(CID) ಕೇಸ್ ಫೈಲ್ ತಲುಪಿದೆ. ಹೊಳೆನರಸೀಪುರ ಪೊಲೀಸರಿಂದ ಸಿಐಡಿಗೆ ಹಸ್ತಾಂತರ ಮಾಡಲಾಗಿದ್ದು, ಬಿ.ಕೆ ಸಿಂಗ್ (BK Singh) ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಕೇಸ್ ಫೈಲ್ ಪರಿಶೀಲನೆ ನಡೆಸಿ ತನಿಖಾಧಿಕಾರಿ ನೇಮಕ ಮಾಡಲಾಗಿದೆ. ಅಧಿಕೃತವಾಗಿ ಕೇಸ್ ಫೈಲ್‌ನನ್ನು ಹೊಳೆನರಸೀಪುರ ಗ್ರಾಮಾಂತರ ಠಾಣೆಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ತಡರಾತ್ರಿ ಸಿಐಡಿ ಕಚೇರಿಗೆ ಹಸ್ತಾಂತರಿಸಲಾಗಿದೆ. ಸಿಐಡಿ ಎಡಿಜಿಪಿ ಬಿ ಕೆ ಸಿಂಗ್ ಅವರಿಂದ ತನಿಖಾಧಿಕಾರಿ ನೇಮಕ ಮಾಡಲಾಗಿದ್ದು, ಬಿ ಕೆ ಸಿಂಗ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯಲಿದೆ. ಬಳಿಕ ಸೂರಜ್ ರೇವಣ್ಣ‌ ಕಸ್ಟಡಿಗೆ ಪಡೆಯಲು ಕೋರ್ಟ್‌ಗೆ ಐಓ ಹೋಗಲಿದ್ದಾರೆ. ಬಾಡಿ ವಾರೆಂಟ್ ಮೂಲಕ ಸೂರಜ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ.

ಇದನ್ನೂ ವೀಕ್ಷಿಸಿ:  'ಕಾಟೇರ' ನಿರ್ದೇಶಕನಿಗೆ ಕೂಡಿ ಬಂದ ಕಂಕಣ ಭಾಗ್ಯ..? ಬನಾರಸ್ ಬೆಡಗಿ ಜೊತೆ ತರುಣ್ ಸುಧೀರ್ ವಿವಾಹ..?

Video Top Stories