
ಬೆಂಗಳೂರು- ಮೈಸೂರು ರಸ್ತೆಯಲ್ಲಿ 5 ಕಿ.ಮೀ ಟ್ರಾಫಿಕ್ ಜಾಂ!
Bengaluru Traffic Jam: ಕುಂಬಳಗೋಡು ಸಮೀಪ ಚರಂಡಿ ಒಡೆದ ಹಿನ್ನಲೆ ಮೈಸೂರು ಬೆಂಗಳೂರು ಹೈವೇನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ
ಬೆಂಗಳೂರು (ಆ. 27): ಕುಂಬಳಗೋಡು ಸಮೀಪ ಚರಂಡಿ ಒಡೆದ ಹಿನ್ನಲೆ ಮೈಸೂರು ಬೆಂಗಳೂರು ಹೈವೇನಲ್ಲಿ (Bengaluru Mysuru Highway) ಟ್ರಾಫಿಕ್ ಜಾಮ್ ಉಂಟಾಗಿದೆ. ಕೆರೆ ಕೋಡಿ ಒಡೆದು ಬೆಂಗಳೂರು-ಮೈಸೂರು ಹೈವೆ ಮಾರ್ಗದಲ್ಲಿರುವ ಹೋಗಿರುವ ಚರಂಡಿ ಕೊಚ್ಚಿ ಹೋಗಿದೆ. ಹೀಗಾಗಿ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ 5ಕಿಮೀ ನಷ್ಟು ದೂರದವರೆಗೆ ವಾಹನ ನಿಂತಿದ್ದು ಟ್ರಾಫಿಕ್ ಜಾಮ್ ಉಂಟಾಗಿದೆ. ನೀರು ನಿಂತ ಜಾಗದಲ್ಲಿ ವಾಹನಗಳು ಮಂದಗತಿಯಲ್ಲಿ ಓಡಾಟ ನಡೆಸುತ್ತಿವೆ. ಹೀಗಾಗಿ ಟ್ರಾಫಿಕ್ನಲ್ಲಿ ಸಿಲುಕಿ ಜನರು ಪರದಾಡುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ