Asianet Suvarna News Asianet Suvarna News

ಶಿವಮೊಗ್ಗದಲ್ಲಿ ಉದ್ಘಾಟನೆ ಕಾಣದ ಸಾರ್ವಜನಿಕ ಶೌಚಾಲಯಗಳು

ಶಿವಮೊಗ್ಗ ನಗರದ ಹಲವೆಡೆ ಸಾರ್ವಜನಿಕ ಶೌಚಾಲಯಗಳು ಉದ್ಘಾಟನೆಯ ಭಾಗ್ಯವಿಲ್ಲದೇ, ಮೂರುವರೆ ವರ್ಷಗಳೇ ಕಳೆದಿವೆ. ಇದರಿಂದ ಜನರು ಪರದಾಡುವಂತೆ ಆಗಿದೆ.
 

ಶಿವಮೊಗ್ಗ: ಸ್ಮಾರ್ಟ್ ಸಿಟಿ ಯೋಜನೆಯಡಿ ಶಿವಮೊಗ್ಗದ ಹೃದಯ ಭಾಗದಲ್ಲಿರುವ ನೆಹರು ರಸ್ತೆ, ದುರ್ಗಿ ಗುಡಿಯಂತಹ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪಬ್ಲಿಕ್ ಟಾಯ್ಲೆಟ್'ಗಳನ್ನು ನಿರ್ಮಿಸಲಾಗಿದೆ. ಆದರೆ ಅವುಗಳ ಉದ್ಘಾಟನೆಯ ಭಾಗ್ಯವಿಲ್ಲದೇ 3-4 ವರ್ಷಗಳೇ ಕಳೆದಿವೆ. ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಸಿದ್ಧಗೊಂಡ ಸುಮಾರು 21 ಹೈಟೆಕ್ ಟಾಯ್ಲೆಟ್'ಗಳು ಗಳು ಹಾಳು ಬಿದ್ದಿದೆ. ಸುಮಾರು 5-6 ಲಕ್ಷ ರೂ. ಖರ್ಚು ಮಾಡಿ ನೀರಿನ ಸಂಪರ್ಕ, ನೀರಿನ ಟ್ಯಾಂಕ್, ವಿದ್ಯುತ್ ಸಂಪರ್ಕ ನೀಡಿ ಸುಸಜ್ಜಿತ ಶೌಚಾಲಯ ನಿರ್ಮಾಣಗೊಂಡಿದೆ. ಶಿವಮೊಗ್ಗದ ಈ ಪ್ರಮುಖ ವಾಣಿಜ್ಯ ಪ್ರದೇಶದಲ್ಲಿ ವ್ಯಾಪಾರಿ ಮಳಿಗಳೇ ಹೆಚ್ಚಾಗಿರುವ ಕಾರಣ ಅಂಗಡಿಗಳಲ್ಲಿ ವ್ಯಾಪಾರ ಮಾಡುವ ಗ್ರಾಹಕರು ಶೌಚಕ್ಕೆ ಪರದಾಡ ನಡೆಸಬೇಕಿದೆ. ಇನ್ನು ಈ ಪ್ರದೇಶಗಳಲ್ಲಿನ ಅಂಗಡಿಗಳಲ್ಲಿ ಕೆಲಸ ಮಾಡುವ ಮಹಿಳಾ ಕೆಲಸಗಾರರು, ಯುವತಿಯರು ದೂರದ ಹೋಟೆಲ್'ಗಳಲ್ಲಿ ಶೌಚಾಲಯ ಹುಡುಕಿಕೊಂಡು ಹೋಗಬೇಕು. ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ನಿಗಮದವರು ಪರಸ್ಪರ ಜಟಾಪಟಿ ಮರೆತು, ಈ ಬಗ್ಗೆ ನಿಗಾವಹಿಸಿ ಪಬ್ಲಿಕ್ ಟಾಯ್ಲೆಟ್ ಉದ್ಘಾಟನೆ ಮಾಡಬೇಕಾಗಿದೆ.

ಸಕ್ಕರೆಯ ಉಪ ಉತ್ಪನ್ನದ ಲಾಭಾಂಶ ರೈತರಿಗೆ ಕೊಡಿ: ಸಚಿವ ಮುನೇನಕೊಪ್ಪ

Video Top Stories