ಸಕ್ಕರೆಯ ಉಪ ಉತ್ಪನ್ನದ ಲಾಭಾಂಶ ರೈತರಿಗೆ ಕೊಡಿ: ಸಚಿವ ಮುನೇನಕೊಪ್ಪ
ರಾಜ್ಯದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಉಪ ಉತ್ಪಾದನೆಗಳನ್ನು ಸಿದ್ಧಪಡಿಸಿದ ಅದರಿಂದ ಬರುವ ಲಾಭಾಂಶವನ್ನು ನೇರವಾಗಿ ರೈತರಿಗೆ ಕೊಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಜವಳಿ, ಕೈಮಗ್ಗ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ಬೆಂಗಳೂರು (ನ.24): ರಾಜ್ಯದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಉಪ ಉತ್ಪಾದನೆಗಳನ್ನು ಸಿದ್ಧಪಡಿಸಿದ ಅದರಿಂದ ಬರುವ ಲಾಭಾಂಶವನ್ನು ನೇರವಾಗಿ ರೈತರಿಗೆ ಕೊಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಲಾಗಿದೆ ಎಂದು ಜವಳಿ, ಕೈಮಗ್ಗ ಮತ್ತು ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ತಿಳಿಸಿದ್ದಾರೆ.
ರಾಜ್ಯದ ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ಎಥನಾಲ್ ಅನ್ನು ಆದಾಯ ಹಂಚಿಕೆ ಸೂತ್ರ (Revenue Sharing Formula)ದ ವ್ಯಾಪ್ತಿಗೆ ಒಳಪಡಿಸುವ ಬಗ್ಗೆ ಚರ್ಚಿಸಲು ಇಂದು ರಾಜ್ಯದಲ್ಲಿ ಎಥನಾಲ್ ಘಟಕಗಳನ್ನು ಹೊಂದಿರುವ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರು/ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು / ವ್ಯವಸ್ಥಾಪಕ ನಿರ್ದೇಶಕರುಗಳ ಜತೆ ವಿಕಾಸಸೌಧದ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಕ್ಕರೆ ಕಾರ್ಖಾನೆಯಲ್ಲಿ ಉಪ ಉತ್ಪಾದನೆ ಕುರಿತು ಮಾಲೀಕರ ಜೊತೆ ಸಭೆ ನಡೆಸಲಾಗಿದ್ದು, ಸರ್ಕಾರದ ಅಧಿಕಾರಿಗಳೊಂದಿಗೂ ಚರ್ಚೆ ಮಾಡಲಾಗಿದೆ. ಸಕ್ಕರೆ ಕೈಗಾರಿಕೆಗಳ (Sugar Factories) ಉಪ ಉತ್ಪನ್ನದ ಲಾಭಾಂಶದ (by product dividend) ಹಣವನ್ನು ರೈತರಿಗೆ ನೀಡಬೇಕು ಅನ್ನೋ ಮನವಿಯನ್ನು ನಾವು ಕಾರ್ಖಾನೆಗಳ ಬಳಿ ಮಾಡಿದ್ದೇವೆ ಎಂದು ತಿಳಿಸಿದರು.
ಬಾಗಲಕೋಟೆ: ರೈತರ ಮಗ್ಗಲು ಮುರಿಯುವ ಕಬ್ಬಿನ ಲಗಾನಿ..!
ಕಬ್ಬಿನ ತೂಕ ವ್ಯತ್ಯಾಸ ಬೇಡ: ಎರಡು ವರ್ಷದ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಹಣ ರೈತರಿಗೆ ನೀಡಿರುವುದರಲ್ಲಿ ಕರ್ನಾಟಕ (Karnataka) ಮೊದಲ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ ನಿಗದಿಪಡಿಸುವ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (FRP) ದರ ಅನ್ವಯ ಎಲ್ಲ ರೈತರಿಗೂ ಹಣ ಕೊಡಿಸಲಾಗುತ್ತಿದೆ. ಸರ್ಕಾರದಿಂದ ಸಕ್ಕರೆ ಕಾರ್ಖಾನೆ ಮತ್ತು ರೈತರ ನಡುವೆ ಯಾವ್ಯಾವ ನಿಯಮಗಳು ಮತ್ತು ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೋ ಅದನ್ನು ಪಾಲನೆ ಮಾಡಲು ಎಲ್ಲೆಡೆ ನಿಗಾವಹಿಸಲಾಗಿದೆ. ಇನ್ನು ಕಬ್ಬಿನಲ್ಲಿ ತೂಕ ಕಡಿಮೆ ಇದೆ ಎಂದು ಹೇಳಿ ಇಳುವರಿ (Yield) ಕಡಿಮೆ ತೋರಿಸುವಂತಿಲ್ಲ. ಈ ಬಗ್ಗೆ ಎಲ್ಲ ಸಕ್ಕರೆ ಕಾರ್ಖಾನೆ ಮಾಲೀಕರಿಗೆ (Factory owner) ಸೂಚನೆ ನೀಡಲಾಗಿದೆ. ಒಂದು ವೇಳೆ ಇಂತಹ ಘಟನೆ ನಡೆದರೆ ಕಾರ್ಖಾನೆ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಕೊಡಲಾಗಿದೆ. ಸರ್ಕಾರ ಎಂದಿಗೂ ರೈತರ (Farmer) ಪರವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಎಫ್‌ಆರ್ ಪಿ ಹೆಚ್ಚಳ ನಾವು ಮಾಡೋಕಾಗಲ್ಲ: ರಾಜ್ಯದಲ್ಲಿ ವಿವಿಧೆಡೆ ಕಬ್ಬು ಬೆಳೆಗಾರರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಬಾಗಲಕೋಟೆ (Bagalakote) ಜಿಲ್ಲೆಗೆ ನಾನೇ ಹೋಗಿ ಬಂದಿದ್ದು, ರೈತರ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಕೆಲವೆಡೆ ಎಫ್‌ಆರ್‍ಪಿ ದರ ಹೆಚ್ಚಳ ಮಾಡುವವರೆಗೂ ಕಾರ್ಖಾನೆ ತೆರೆಯಬಾರದು ಎಂದು ಪ್ರತಿಭಟನೆ ಮಾಡಿದರೆ, ಮತ್ತೆ ಕೆಲವು ರೈತರ ಸಂಘಟನೆಗಳು ಕೂಡಲೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ ಕಬ್ಬು ನುರಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದರಂತೆ ಬಾಗಲಕೋಟೆ ಸೇರಿ ಬಹುತೇಕ ಕಡೆಗಳಲ್ಲಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಿಸಲಾಗಿದೆ. ಆದರೆ, ಎಫ್ ಆರ್ ಪಿ ದರ ಏರಿಕೆ ಮಾಡುವಂತೆ ನಾವು ಮಾಲೀಕರಿಗೆ ಹೇಳಲು ಸಾಧ್ಯವಿಲ್ಲ. ಅದರ ಬದಲು ಉಪ ಉತ್ಪನ್ನದ ಲಾಭಾಂಶ (Dividend) ಕೊಡಲು ಹೇಳಿದ್ದೇವೆ ಎಂದು ತಿಳಿಸಿದರು.
ಕಬ್ಬು ನಿಯಂತ್ರಣ ಮಂಡಳಿ ಜತೆ ಸಭೆ: ರೈತರಿಗೆ ಅನುಕೂಲವಾಗಲು ಹೊಸ ಆಪ್ ಬಿಡುಗಡೆ
34 ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಸಭೆ: ಬಾಗಲಕೋಟೆ ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಎಫ್‌ಆರ್‍ಪಿಗಿಂತ ಜಾಸ್ತಿ ಬೆಲೆ (Abouve FRP) ನೀಡಿದ್ದೇವೆ. ಕಾರ್ಖಾನೆಗಳ ಮಾಲೀಕರು ಕೊಡಬೇಕಿದ್ದ ಸಾಲ ಕೊಡಿಸಿದ್ದೇವೆ. ರೈತರಿಗೆ ಕಬ್ಬು ಕಾರ್ಖಾನೆಗೆ ಕೊಡುವ ವೇಳೆ ಯಾವುದಾದರೂ ಸಮಸ್ಯೆ ಬಂದಲ್ಲಿ ಅದನ್ನು ಪರಿಹರಿಸಲು ಸಹಾಯವಾಣಿ (Helpline) ಆರಂಭಿಸಿದ್ದೇವೆ. ತೂಕದಲ್ಲಿ ಮೋಸ ಮಾಡಿದರೆ ಕಾನೂನಾತ್ಮಕ ಕ್ರಮ (Legal Action) ಜರುಗಿಸುತ್ತೇವೆಂದು ಎಚ್ಚರಿಕೆ ನೀಡಲಾಗಿದೆ. ಈಗಾಗಲೇ 72 ಕಾರ್ಖಾನೆಗಳಲ್ಲಿ ಕಬ್ಬು ಅರಿಯಲು ಅನುಮತಿ ನೀಡಿದ್ದೇವೆ. ಪ್ರತಿ ಜಿಲ್ಲಾ ಕೇಂದ್ರಗಳಿಗೆ ಹೋಗಿ ರೈತರ ಹೋಗಿ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೈತರು, ಮಾಲೀಕರ ಸೌಹಾರ್ದತೆ ಅಗತ್ಯ: ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳ ಸುಗಮ ನಿರ್ವಹಣೆಗೆ ರೈತ ಮತ್ತು ಕಾರ್ಖಾನೆ ಮಾಲೀಕರು ಒಂದಾಗಿರಬೇಕು. ನಮ್ಮ ಸರ್ಕಾರ ರೈತರ ಪರವಾಗಿದೆ. ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ರೈತಯರ ಹೋರಾಟಗಳ ಬಗ್ಗೆ ಮಾಹಿತಿ ಸಂಗ್ರಹಣೆಗೆ ಸಮಿತಿ ರಚಿಸಲಾಗಿದೆ. ಕೆಲವು ದಿನಗಳಲ್ಲಿ ಸಮಿತಿಯಿಂದ ಮುಖ್ಯಮಂತ್ರಿಗೆ ವರದಿ ಕೊಡಲಾಗುತ್ತದೆ. ಇಬ್ಬರೂ ಸಹ ಸೌಹಾರ್ದಯುತವಾಗಿ ಹೋಗಬೇಕು. ರೈತರು ಹೋರಾಟ ಕೈ ಬಿಡಬೇಕು ಎಂದು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.