Asianet Suvarna News Asianet Suvarna News
breaking news image

ಇಂದ್ರಜಿತ್ ಲಂಕೇಶ್ ಪುತ್ರನ ಹಾಡು ಟ್ರೆಂಡಿಂಗ್! ದಕ್ಷಿಣದ ಸಿನಿಮಾಗಳ ಮುಂದೆ ಧೂಳೆಬ್ಬಿಸಿದ ‘ಗೌರಿ’ ಸಾಂಗ್ !

ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಮರ್ಜಿತ್, ಸಾನ್ಯಾ ಅಯ್ಯರ್ ಅಭಿನಯದ `ಗೌರಿ’ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ 'ಧೂಳ್ ಎಬ್ಬಿಸಾವ..’ ಹಾಡು ಬಿಡುಗಡೆ ಆಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದೆ.
 

ಎಲ್ಲೆಲ್ಲೂ ಕೇಳಿ ಬರುತ್ತಿರೋ ಧೂಳ್ ಎಬ್ಬಿಸಾವ ಹಾಡು ಈಗ ಹೊಸ ಇತಿಹಾಸ ಬರೆದಿದೆ. ಧೂಳ್ ಎಬ್ಬಿಸಾವ ಸಾಂಗ್(Dhool yebsava Song) ಆಲ್ ಇಂಡಿಯಾ ಲೆವೆಲ್‌ನಲ್ಲಿ ಟ್ರೆಂಡ್ ಸೃಷ್ಟಿಸುವ ಮೂಲಕ ರೆಕಾರ್ಡ್ ಮಾಡಿದೆ. ಶಿವುಬೆರ್ಗಿ ಸಾಹಿತ್ಯ ಬರೆದು, ಸಂಗೀತ ಸಂಯೋಜಿಸಿರುವ ಈ ಹಾಡನ್ನು ಅನಿರುದ್ಧ್ ಶಾಸ್ತ್ರೀ  ಮತ್ತು ಅನನ್ಯಾ ಭಟ್ ಅವರ ಸುಂದರ ಕಂಠದಲ್ಲಿ ಮೂಡಿಬಂದಿದೆ. ಗೌರಿ’ ಚಿತ್ರದ(Gowri Movie) ನಾಯಕ ಸಮರ್ಜಿತ್ ಲಂಕೇಶ್(Samarjit Lankesh) ಮತ್ತು ಖ್ಯಾತ ನಟಿ ಸಂಜನಾ ಆನಂದ್ ಈ ಹಾಡಿಗೆ ಭರ್ಜರಿಯಾಗಿ ಸ್ಟೆಪ್ ಹಾಕಿದ್ದಾರೆ. ಭಜರಂಗಿ ಮೋಹನ್ ಈ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೈಮ್ ಬರುತ್ತೆ ಮತ್ತು ಇತರೆ ಹಾಡುಗಳು ಹಿಟ್ ಲಿಸ್ಟ್ ಸೇರಿವೆ. ಇದೀಗ ಜವಾರಿ ಹಾಡಿನ ಸದ್ದು. ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಟಾಪ್ 5 ಟ್ರೆಂಡಿಂಗ್‌ನಲ್ಲಿರುವ ಈ ಹಾಡಿಗೆ ನಾಡಿನ ಲಕ್ಷಾಂತರ ಮಂದಿ ರೀಲ್ಸ್ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್! ವಿಡಿಯೋ ವೈರಲ್ ಬಳಿಕ ಕ್ಷಮೆ ಕೇಳಿದ ನಟ!

Video Top Stories