Asianet Suvarna News Asianet Suvarna News

ಹಲವು ನಿಗೂಢ ಪ್ರಕರಣಗಳ ಪತ್ತೆದಾರಿ ಪೊಲೀಸ್ ಶ್ವಾನ ಇನ್ನಿಲ್ಲ

246 ಪ್ರಕರಣಗಳಲ್ಲಿ ರಾಯಚೂರು ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದ ರೂಭಿ(ಶ್ವಾನ) ಸಾವು| ಅನಾರೋಗ್ಯದಿಂದ ರೂಭಿ ಸಾವು| ಕಳೆದ 13 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ರೂಭಿ ಶ್ವಾನ|

First Published Dec 6, 2019, 2:47 PM IST | Last Updated Dec 6, 2019, 3:01 PM IST

ರಾಯಚೂರು(ಡಿ.06): ಹಲವಾರು ಪ್ರಕರಣಗಳಲ್ಲಿ ಪೊಲೀಸ್ ಇಲಾಖೆಗೆ ಸಹಾಯ ಮಾಡಿದ್ದ ರೂಭಿ(ಶ್ವಾನ) ಇಂದು ಅನಾರೋಗ್ಯದಿಂದ ಮೃತಪಟ್ಟಿದೆ. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗೌರವ ವಂದನೆ ಸಲ್ಲಿಸಿ, ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಶವ ಸಂಸ್ಕಾರ ನಡೆಸಲಾಯ್ತು. ಪೊಲೀಸ್ ಇಲಾಖೆಯಲ್ಲಿ ಕಳೆದ 13 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ರೂಭಿ 246 ಪ್ರಕರಣಗಳಲ್ಲಿ ಸಹಾಯ ಮಾಡಿದೆ. 

ಮಾನ್ವಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನವೆಗಿದ ಆರೋಪಗಳನ್ನು ಸೆರೆ ಹಿಡಿಯುವುದಕ್ಕೆ, ಶಕ್ತಿನಗರದಲ್ಲಿನ ಇಂಜಿನಿಯರ್ ಹತ್ಯೆ ಪ್ರಕರಣ ಹಂತಕರ ಸೆರೆ ಹಿಡಿಯುವ ಪ್ರಕರಣ ಪ್ರಮುಖ ಪಾತ್ರವಹಿಸಿತ್ತು. ರೂಭಿ ಸ್ವಾನ್ನಪ್ಪಿರುವುದು ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ರಾಯಚೂರು ಎಸ್ ಪಿ ಡಾ.‌ಸಿ.ಬಿ. ವೇದಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.