Asianet Suvarna News Asianet Suvarna News

ಡೆವಿಲ್ ಗ್ಯಾಂಗ್‌ನ ಖೇಲ್ ಖತಂ..ಏನಿದರ ಒಳಮರ್ಮ..? ಆ ಆರೋಪಿಯ ಮೇಲಿದೆ ವಂಚನೆ ಕೇಸ್!

ಬಾಸ್ ಬಾಸ್ ಅಂತ  ಬಾಯಿಬಡ್ಕೊಂಡವನಿಗೆ  ಪೊಲೀಸರ ಪಾಠ!
ಹೇಗೆ ಸಾಗಿದೆ ಗೊತ್ತಾ ರೇಣುಕಾಸ್ವಾಮಿ ಮರ್ಡರ್ ಕೇಸ್ ತನಿಖೆ..?
ದರ್ಶನ್ ಫೋನ್ ರಿಟ್ರೀವ್ ಆದ್ರೆ ಯಾರಿಗೆ ಶುರು ಕೇಡುಗಾಲ..?

ಅವತ್ತು ಬಾಸ್ ಬಾಸ್ ಅಂತ  ಬಾಯಿಬಡ್ಕೊಂಡವನ ಬಾಲವನ್ನು ಪೊಲೀಸರು ಸುಟ್ಟಿದ್ದಾರೆ. ರೇಣುಕಾಸ್ವಾಮಿ ಮರ್ಡರ್ ಕೇಸ್(Renukaswamy murder case).. ಇದು ರಾಜ್ಯವನ್ನೇ ತಲ್ಲಣಗೊಳಿಸಿದ ಕೊಲೆ ಪ್ರಕರಣ. ಅದು ಬರೀ ಕೊಲೆ ಅಲ್ಲ,ಅಮಾನುಷ ಹಲ್ಲೆಯ ಬಳಿಕ ನಡೆದ ಬರ್ಬರ ಹತ್ಯೆ. ಈ ಭೀಕರ ಮರ್ಡರ್ ಕೇಸಲ್ಲಿ ಅಂದರ್ ಆಗಿರೋದು ನಟ ದರ್ಶನ್ (Darshan). ದರ್ಶನ್, ಈಗ ಪರಪ್ಪನ ಅಗ್ರಹಾರದ ಜೈಲು(Parappana Agrahara Jail) ಸೇರಿದ್ದಾಗಿದೆ. ಆತನ ಬೆನ್ನ ಹಿಂದಿದ್ದ ಆರೋಪಿಗಳು ಕೂಡ ಕಂಬಿ ಎಣಿಸ್ತಾ ಇದಾರೆ. ಇನ್ನೊಂದು ಕಡೆ, ದಿನ ಬೆಳಗಾದ್ರೆ ಸಾಕು, ಪೊಲೀಸರು ಹೊಸದೊಂದು ಸಾಕ್ಷಿ ಪತ್ತೆ ಮಾಡ್ತಾ ಇದಾರೆ. ಆ ಸಾಕ್ಷಿಗಳು ದರ್ಶನ್ ಅಂಡ್  ಗ್ಯಾಂಗ್ ವಿರುದ್ಧವೇ ಮಾತಾಡ್ತಾ ಇದಾವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇಲ್ಲೀ ತನಕ ಏನೇನಾಗಿದೆಯೋ, ಇಷ್ಟರವರೆಗೂ ನಮ್ಮ ಕರ್ನಾಟಕ ಪೊಲೀಸರು ಮಾಡಿರೋದು, ಅದ್ಭುತ ಅಂತನ್ನಿಸೋ ಕೆಲಸ.. ಈ ವಿಚಾರವಾಗಿ,  ಕಾಮಾಕ್ಷಿಪಾಳ್ಯ ಪೊಲೀಸರಿಗೆ ಕಂಗ್ರಾಟ್ಸ್ ಹೇಳ್ಲೇಬೇಕು.. ಅವರ ತನಿಖೆಯಿಂದಾಗಿನೇ, ಇವತ್ತು ದರ್ಶನ್ ಗೆ ನ್ಯಾಯಾಂಗ ಬಂಧನ  ಉಂಟಾಗಿರೋದು. ಹಾಗಂತ,  ದರ್ಶನ್ ಕಂಬಿ ಹಿಂದೆ ನಿಂತ ಮೇಲೂ ಕಾಮಾಕ್ಷಿಪಾಳ್ಯದ ಪೊಲೀಸರೇನು ರೆಸ್ಟ್ ಮಾಡ್ತಾ ಇಲ್ಲ.. ಬದಲಿಗೆ ಇನ್ವಸ್ಟಿಗೇಷನ್ನ ಇನ್ನಷ್ಟು  ತೀವ್ರಗೊಳಿಸಿದ್ದಾರೆ. ಸದ್ಯಕ್ಕಿರೋ ಮಾಹಿತಿ ಪ್ರಕಾರ, ದರ್ಶನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸೋಕೆ ಶರವೇಗದಲ್ಲಿ ತಯಾರಿ ನಡೆಸ್ತಾ ಇದಾರಂತೆ ಪೊಲೀಸರು.  ಪೊಲೀಸ್ ಪಡೆಯಲ್ಲೇ ಕೆಲವು ತಂಡಗಳನ್ನು ರಚಿಸಿಕೊಂಡಿದ್ದಾರೆ. ಒಬ್ಬರ ಜೊತೆಗೊಬ್ಬರು ಸಹಕಾರಿಸಿಕೊಳ್ತಾ, ಸಹಾಯ ಮಾಡ್ಕೊಳ್ತಾ, ತನಿಖೆ ನಡೆಸ್ತಾ ಇದಾರೆ.. ಈ ತನಿಖೆ ಹೋಗ್ತಾ ಇರೋ ಸ್ಪೀಡ್ ನೋಡಿದ್ರೆ, ದರ್ಶನ್ ಗ್ರಹಚಾರ ಕೆಟ್ಟು ಕೂತಿದೆ ಅನ್ನೋದು ಹಲವರ ಅಭಿಮತ.

ಇದನ್ನೂ ವೀಕ್ಷಿಸಿ:  Murder in Kolar: 13 ವರ್ಷದ ಜಗಳ ಕೊಲೆಯಲ್ಲಿ ಅಂತ್ಯ..! ವಿಡಿಯೋ ಮಾಡಿ ಸುಳಿವು ಕೊಟ್ಟಿದ್ದ ಸ್ವಾಮೀಜಿ..!

Video Top Stories