Chikmagalur

*  ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದ ಘಟನೆ
*  ಬಾರ್‌ ವಿರೋಧಿಸಿದ್ದಕ್ಕೆ ಏಳು ಜನರ ಹೊತ್ತೊಯ್ದ ಪೊಲೀಸರು
*  ಗ್ರಾಮಕ್ಕೆ ಬಾರ್‌ ಬೇಡ ಅಂತ ಪ್ರತಿಭಟಿಸೋದೆ ತಪ್ಪಾ?
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ನ.15): ಬೆಳ್ಳಂಬೆಳಿಗ್ಗೆ ಅಮಾಯಕರ ಮೇಲೆ ಪೊಲೀಸರು ಗೂಂಡಾಗಿರಿ ನಡೆಸಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ. ಬಾಗಿಲು, ಹೆಂಚು ಮುರಿದು ಮನೆಗೆ ನುಗ್ಗಿ ಖಾಕಿ ಪಡೆ ದರ್ಪ ತೋರಿದ್ದಾರೆ. ಬಾರ್‌ ವಿರೋಧಿಸಿದ್ದಕ್ಕೆ ಏಳು ಜನರನ್ನ ಹೊತ್ತೊಯ್ದಿದ್ದಾರೆ ಪೊಲೀಸರು. ನಮ್ಮ ಗ್ರಾಮಕ್ಕೆ ಬಾರ್‌ ಬೇಡ ಅಂತ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. 

Puneeth Rajkumarರನ್ನು ಮನೆ ಮಗನಂತೆ ಪ್ರೀತಿಸಲು ಕಾರಣವೇನು?

ಈ ಕಾರಣಕ್ಕೆ ಒಂದೇ ಮನೆಯ ಮೂವರನ್ನ ಪೊಲೀಸರು ಬಂಧಿಸಿದ್ದಾರೆ. ಕಡೂರ್‌ ಪಿಎಸ್‌ಐ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾರ್‌ ವಿರುದ್ಧ ಠಾಣೆ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಗ್ರಾಮಕ್ಕೆ ಬಾರ್‌ ಬೇಡ ಅಂತ ಪ್ರತಿಭಟಿಸೋದೆ ತಪ್ಪಾ ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. 

Related Video