ವಿಜಯಪುರ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪಣ ತೊಟ್ಟ ಧೀರ ಯಾಸಿನ್ ಜವಳಿ..!
ವಿಜಯಪುರ ಜಿಲ್ಲೆಯಲ್ಲಿ ಅಪಾರ ಜನಮನ ಗೆದ್ದ ಯಾಸಿನ್ ಜವಳಿ| ನಿತ್ಯ ಜನಸೇವೆಯಲ್ಲಿ ತೊಡಗಿ ತಮ್ಮ ಕೈಲಾದ ನೆರವನ್ನು ನೀಡುತ್ತಾ ಬಂದ ಜನನಾಯಕ| ಯಾಸಿನ್ ಜವಳಿಗೆ ಬಡವರು ಅಂದರೆ ಅಪಾರ ಪ್ರೀತಿ|
ವಿಜಯಪುರ(ಮಾ.03): ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು ಹಗಲಿರುಳು ಎನ್ನದೆ ಸಮಾಜಮುಖಿ ಕಾರ್ಯಗಳನ್ನ ಮಾಡುತ್ತ ಜಿಲ್ಲೆಯ ಮನೆ ಮಗನಾಗಿದ್ದಾರೆ ಯಾಸಿನ್ ಜವಳಿ. ಇವರಿಗೆ ಬಡವರು ಅಂದರೆ ಅಪಾರ ಪ್ರೀತಿ. ಅವರ ಕಷ್ಟಗಳಿಗೆ ಸದಾ ಮರುಗಿ, ನಿತ್ಯ ಜನಸೇವೆಯಲ್ಲಿ ತೊಡಗಿ ತಮ್ಮ ಕೈಲಾದ ನೆರವನ್ನು ನೀಡುತ್ತಾ ಬಂದಿದ್ದಾರೆ.
ನಿನಗೆ ದಿಕ್ಕಿಲ್ಲದ ಸಾವು ಬರಲಿ, ಕೃಷ್ಣನಿಗೆ ಶಾಪ ಕೊಟ್ಟ ಗಾಂಧಾರಿ
ಈ ಮೂಲಕ ಯಾಸಿನ್ ಜವಳಿ ಅಪಾರ ಜನಮನ ಗೆದ್ದಿದ್ದಾರೆ. ಅಲ್ಲದೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿದ್ದಾರೆ. ಜಾತಿ ಧರ್ಮವನ್ನ ತೊರೆದು ಸದಾ ಕಾಲ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಶ್ರಮಿಸುತ್ತಿರುವ ಯಾಸಿನ್ ಜವಳಿ ಅವರ ಖಾರ್ಯಕ್ಕೆ ಎಲ್ಲರೂ ಅಪಾರ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ.