ಶಕ್ತಿ ಯೋಜನೆ ಎಫೆಕ್ಟ್‌, ಆಟೋಗಳು ಖಾಲಿ..ಖಾಲಿ: ಮಾರಾಟಕ್ಕೆ ಮುಂದಾದ ಆಟೋ ಮಾಲೀಕರು

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಘೋಷಣೆ ಮಾಡಿದ ಹಿನ್ನೆಲೆ ಪ್ರಯಾಣಿಕರಿಲ್ಲದೇ ಕಂಗಾಲಾಗಿರುವ ಆಟೋ ಮಾಲೀಕರು ಆಟೋಗಳನ್ನು ಮಾರಲು ಮುಂದಾಗಿದ್ದಾರೆ.
 

First Published Jun 27, 2023, 10:31 AM IST | Last Updated Jun 27, 2023, 10:31 AM IST

ಬೆಂಗಳೂರು: ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದ ಆಟೋ ಮಾಲೀಕರು ಪರದಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಹಿನ್ನೆಲೆ ಎಲ್ಲಾರು ಬಸ್‌ನಲ್ಲೇ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರಿಲ್ಲದೇ ಕಂಗಾಲಾಗಿರುವ ಆಟೋ ಮಾಲೀಕರು ಮಾರಾಟ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಹೊಸ ನೋಂದಣಿಯನ್ನು ನಿಲ್ಲಿಸುವಂತೆ ಆಟೋ ಚಾಲಕರ ಅಸೋಸಿಯೇಷನ್‌ ಮನವಿ ಮಾಡಿದೆ. ಇನ್ನೂ ಬೆಂಗಳೂರಿನಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಆಟೋಗಳು ಇದ್ದು, ಶೇ.20 ರಷ್ಟು ಮಾರಾಟ ಮಾಡಲು ಮಾಲೀಕರು ಮುಂದಾಗಿದ್ದಾರೆ. ಜೊತೆಗೆ ಸರ್ವೆಯನ್ನು ಮಾಡಿ, ಸರ್ಕಾರಕ್ಕೆ ವರದಿ ಕೊಡಲು ಆಟೋ ಅಸೋಸಿಯೇಷನ್‌ ಮುಂದಾಗಿದೆ.  

ಇದನ್ನೂ ವೀಕ್ಷಿಸಿ: ಬೆಂಗಳೂರಿನಲ್ಲಿ ಎಣ್ಣೆ ನಶೆಯಲ್ಲಿ ಯುವಕರ ಪುಂಡಾಟ: 25ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ