ಬೆಂಗಳೂರಿನಲ್ಲಿ ಎಣ್ಣೆ ನಶೆಯಲ್ಲಿ ಯುವಕರ ಪುಂಡಾಟ: 25ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ

ಬೆಂಗಳೂರಿನ ಗಾಯಿತ್ರಿ ನಗರದಲ್ಲಿ ಮದ್ಯದ ನಶೆಯನ್ನು ಯುವಕರು ಪುಂಡಾಡ ಮೆರೆದಿರುವ ಘಟನೆ ನಡೆದಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಮದ್ಯದ ನಶೆಯಲ್ಲಿ ಯುವಕರು ಪುಂಡಾಟ ಮೆರೆದಿರುವ ಘಟನೆ ಗಾಯಿತ್ರಿ ನಗರ ಮೊದಲನೇ ಮುಖ್ಯರಸ್ತೆಯಲ್ಲಿ ನಡೆದಿದೆ. ಕುಡಿದ ಅಮಲಿನಲ್ಲಿ 25ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆಸಿದ್ದಾರೆ. ಮನೆಯ ಮುಂದೆ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾರೆ. ಅಲ್ಲದೇ ಓರ್ವ ಯುವಕನ ಮೇಲೆ ಕಾರು ಚಲಾಯಿಸಿ, ಪರಾರಿಯಾಗಲು ಯತ್ನಿಸುತ್ತಿರುವಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಡುಗಿ ವಿಚಾರವಾಗಿ ತಲೆಕೆಟ್ಟು ಈ ರೀತಿ ಮಾಡಿದ್ದಾರೆ ಎಂಬ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಮಲ್ಲೇಶ್ವರಂ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ವೀಕ್ಷಿಸಿ: ತನಗಿಂತ 10 ಪಟ್ಟು ಬಡವನನ್ನು ಮದುವೆಯಾಗುತ್ತಿರುವ ನಟಿ: ಆತನ ಬಳಿಯಿರುವ ಆಸ್ತಿ ಎಷ್ಟು ?

Related Video