Asianet Suvarna News Asianet Suvarna News

ಫೇಸ್‌ಬುಕ್‌ನಿಂದ ಸ್ಪೂರ್ತಿ: ಲಂಚ ಮುಟ್ಟೋದೆ ಇಲ್ವಂತೆ ಈ ಅಧಿಕಾರಿ

ರಾಯಚೂರು(ನ.28): ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಓರ್ವ ಅಧಿಕಾರಿಯನ್ನ ಪ್ರಾಮಾಣಿಕನನ್ನಾಗಿ ಮಾಡಿದೆ. ಹೌದು, ನಗರದ ರಿಮ್ಸ್ ಆಸ್ಪತ್ರೆಯ ಕಚೇರಿ ಅಧೀಕ್ಷಕ ಕೆ.ಕರಿಯಪ್ಪ ಫೇಸ್ ಬುಕ್ ನಿಂದ ಸ್ಫೂರ್ತಿಗೊಂಡು ತಮ್ಮ‌ ಚೇಂಬರ್ ನ ಟೇಬಲ್ ಮೇಲೆ ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ. ನಾನು ಭ್ರಷ್ಟ ಅಧಿಕಾರಿಯಾಗಲಾರೆ ಅಂತ ಫಲಕವನ್ನು ಹಾಕಿಕೊಂಡಿದ್ದಾರೆ. 

ಈ ಬಗ್ಗೆ ಮಾತನಾಡಿದ ಅವರು, ಇಡೀ ವ್ಯವಸ್ಥೆಯನ್ನು ಬದಲಿಸಲು ಸಾಧ್ಯವಿಲ್ಲ. 2012 ರಿಂದ ಆಸ್ಪತ್ರೆಯಲ್ಲಿ ಎರಡು ವರ್ಷಗಳಿಂದ ಈ ಬೋರ್ಡ್ ಹಾಕಿಕೊಂಡಿದ್ದೇನೆ, ಮೊದಲು ನಾವು ಬದಲಾದರೆ ಮಾತ್ರ ಸಮಾಜ ಬದಲಾಗುತ್ತೆ. ಹಾಗಾಗಿ ನಾನು ಬದಲಾಗಿದ್ದೇನೆ.ಸರ್ಕಾರ ಸುತ್ತೋಲೆ ಹೊರಡಿಸಿ ಎಲ್ಲರೂ ಬೋರ್ಡ್ ಹಾಕಿಕೊಳ್ಳುವಂತೆ ಸೂಚಿಸಿದರೆ ಭ್ರಷ್ಟಾಚಾರ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ. 