ರಕ್ಷಾ ಫೌಂಡೇಶನ್‌ ವತಿಯಿಂದ ಪುಸ್ತಕ ವಿತರಣೆ: ಶಾಲಾ ಮಕ್ಕಳಿಗೆ ಉಚಿತ ನೋಟ್‌ಬುಕ್‌ ನೀಡುವ ಕಾರ್ಯಕ್ರಮ

ಜಯನಗರ ಶಾಸಕ ಕೆ.ಸಿ ರಾಮಮೂರ್ತಿ ಸ್ಥಾಪನೆಯ ರಕ್ಷಾ ಫೌಂಡೇಶನ್ ಬಡ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ 12 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರಿನ ರಕ್ಷಾ ಫೌಂಡೇಶನ್ ವತಿಯಿಂದ ಇಂದು ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ(Notebook distribution) ಕಾರ್ಯಕ್ರಮ ನಡೆಸಲಾಯಿತು. ಜಯನಗರ ಶಾಸಕ ಕೆ.ಸಿ ರಾಮಮೂರ್ತಿ(MLA KC Ramamurthy) ಸ್ಥಾಪನೆಯ ರಕ್ಷಾ ಫೌಂಡೇಶನ್ (Raksha Foundation) ಬಡ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ 12 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಹಾಗೂ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದು, ಈ ವರ್ಷ ಬೆಂಗಳೂರು ಸೇರಿದಂತೆ ಅಕ್ಕ ಪಕ್ಕದ ಹಲವು ಜಿಲ್ಲೆಗಳ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ನೀಡಲಾಯಿತು. ಗಂಗಾವತಿ, ಆನೇಕಲ್ ,ಮಧುಗಿರಿ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಿಗೂ ಸಹ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶವನ್ನು ಕಾರ್ಯಕ್ರಮ ಒಳಗೊಂಡಿದೆ ಎಂದು ಜಯನಗರ ಶಾಸಕ ಕೆಸಿ ರಾಮಮೂರ್ತಿ ತಿಳಿಸಿದ್ರು. ಇದೇ ಸಂದರ್ಭದಲ್ಲಿ ಜಯನಗರ ವಿಧಾನ ಸಭಾ ಕ್ಷೇತ್ರದ ನಾಗರಿಕರ ಬಳಕೆಗಾಗಿ ಎರಡು ಉಚಿತ ಆ್ಯಂಬುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಲಾಯ್ತು. ಕಾರ್ಯಕ್ರಮದಲ್ಲಿ ನಟ ಸುದೀಪ್(sudeep) ಭಾಗವಹಿಸಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಿದ್ರು.

ಇದನ್ನೂ ವೀಕ್ಷಿಸಿ: ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ರಾತ್ರಿಯಿಡಿ ಸೂರಜ್‌ ರೇವಣ್ಣ ವಿಚಾರಣೆ ನಡೆಸಿದ ಪೊಲೀಸರು

Related Video