Asianet Suvarna News Asianet Suvarna News

ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ರಾತ್ರಿಯಿಡಿ ಸೂರಜ್‌ ರೇವಣ್ಣ ವಿಚಾರಣೆ ನಡೆಸಿದ ಪೊಲೀಸರು

ಸಂತ್ರಸ್ತನ ದೂರಿನ ಅನ್ವಯ ಸೂರಜ್‌ಗೆ ಖಾಕಿ ಪ್ರಶ್ನೆಗಳ ಸುರಿಮಳೆ
ಯಾವುದೇ ಕ್ಷಣದಲ್ಲಿ MLC ಸೂರಜ್ ರೇವಣ್ಣ ಬಂಧನ ಸಾಧ್ಯತೆ
ಹೊಳೆನರಸೀಪುರ ಠಾಣೆಯಲ್ಲಿ ಸೂರಜ್ ವಿರುದ್ಧ FIR ದಾಖಲು
 

ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ(Sexual assault) ಆರೋಪ ಕೇಳಿಬಂದಿದ್ದು, ವಶಕ್ಕೆ ಪಡೆದು ರಾತ್ರಿಯಿಡಿ ವಿಚಾರಣೆ ನಡೆಸಲಾಗಿದೆ. ಸಂತ್ರಸ್ತ(Victim) ಕೊಟ್ಟ ದೂರಿನ ಮೇಲೆ ಹೊಳೆನರಸೀಪುರದಲ್ಲಿ FIR ದಾಖಲು ಮಾಡಲಾಗಿದೆ. IPC ಸೆಕ್ಷನ್ 377,506,342,34ರ ಅಡಿ ದೂರು ದಾಖಲಿಸಿ ವಿಚಾರಣೆ ನಡೆಸಲಾಗಿದೆ. ಸಕಲೇಶಪುರ ಡಿವೈಎಸ್‌ಪಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ. ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಿ ಮತ್ತೆ ಠಾಣೆಗೆ ಪೊಲೀಸರು ಕರೆತಂದಿದ್ದಾರೆ. ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಸೂರಜ್ ರೇವಣ್ಣಗೆ ಗ್ರಿಲ್ ಮಾಡಲಾಗಿದೆ. ಸಂತ್ರಸ್ತನ ದೂರಿನ ಅನ್ವಯ ಸೂರಜ್‌ಗೆ ಖಾಕಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಯಾವುದೇ ಕ್ಷಣದಲ್ಲಿ MLC ಸೂರಜ್ ರೇವಣ್ಣ ಬಂಧನ ಮಾಡುವ ಸಾಧ್ಯತೆ ಇದೆ. 

ಇದನ್ನೂ ವೀಕ್ಷಿಸಿ:  ವಿಜಯಲಕ್ಷ್ಮಿ ಮೇಲೆ ದರ್ಶನ್‌ ಅಂದು ಹಲ್ಲೆ ಮಾಡಿದ್ದು ಯಾಕೆ? ಪತ್ನಿಗೆ ಬಹಿರಂಗ ಕ್ಷಮೆ ಕೇಳಿದ್ದ ನಟ!

Video Top Stories