'ಕಲ್ಕಿ 2898 AD' ರಿಲೀಸ್ ದಿನವೇ ‘ಟಾಕ್ಸಿಕ್’ನಿಂದ ಸಿಕ್ತು ಬಿಗ್ ನ್ಯೂಸ್! ಹಾಲಿವುಡ್ ರೇಂಜ್‌ನಲ್ಲಿ ಸಿನಿಮಾ ಮಾಡುತ್ತಿರೋ ಯಶ್ ಟೀಂ

ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಡಾರ್ಲಿಂಗ್ ಪ್ರಭಾಸ್ ದಂಗಲ್ ಶುರುವಾಗಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ನಟನೆಯ ಕಲ್ಕಿ 2898 AD ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿ ದಾಖಲೆಗಳ ಸರದಾರ ಆಗುತ್ತಿದೆ. 
 

First Published Jun 29, 2024, 10:39 AM IST | Last Updated Jun 29, 2024, 10:40 AM IST

ಕಲ್ಕಿ ಸಿನಿಮಾ ನೋಡಿದವರು ಈ ಸಿನಿಮಾವನ್ನ ಹಾಲಿವುಡ್ ಮೂವಿ ರೇಂಜ್‌ಗೆ ಹೊಗಳುತ್ತಿದ್ದಾರೆ. ಕಲ್ಕಿಯಲ್ಲಿ ಹಲವು ಸರ್ಪ್ರೈಸ್‌ಗಳಿದ್ದು ಈ ಕಲ್ಕಿಗೂ ಯಶ್‌ರ ಟಾಕ್ಸಿಕ್‌ಗೂ ಹೊಸ ಸಂಬಂಧವೊಂದು ಬೆಸೆದುಕೊಂಡಿದೆ. ಪ್ರಭಾಸ್‌ರ ಕಲ್ಕಿ ಸಿನಿಮಾ ನೋಡಿ ವಾವ್ಹ್ ಅನ್ನುತ್ತಿದ್ದಾರೆ. ಈ ಸಿನಿಮಾದಲ್ಲಿರೋ ವಿಶ್ಯುವಲ್ ಟ್ರೀಟ್ ಅಬ್ಬಬ್ಬಾ ಅನ್ನುವಂತಿದೆ. ಇದಕ್ಕೆ ಕಾರಣ ಡಿಎನ್ಇಜಿ ವಿಎಫ್ಎಕ್ಸ್ ಎಫೆಕ್ಟ್. ಇದೀಗ ಕಲ್ಕಿ 2898 AD ಸಿನಿಮಾ (Kalki 2898 AD Movie) ರಿಲೀಸ್ ಬೆನ್ನಲ್ಲೇ ನಟ ಯಶ್ (Yash) ಅಭಿನಯದ ಟಾಕ್ಸಿಕ್(Toxic) ಬಗ್ಗೆ ಸರ್ಪ್ರೈಸ್ ಸುದ್ದಿ ಸಿಕ್ಕಿದೆ. ಈ ಕಲ್ಕಿಗೂ ಯಶ್‌ರ ಟಾಕ್ಸಿಕ್‌ಗೂ ಒಂದು ಸಂಬಂಧ ಬೆಸೆದಿದೆ. ಅದು ಕಲ್ಕಿಗೆ ಡಿಎನ್ಇಜಿ ವಿಎಫ್ಎಕ್ಸ್ ಮಾಡಿದ್ದ ಕಂಪನಿ ಟಾಕ್ಸಿಕ್ ಸಿನಿಮಾಗೂ ಕೆಲಸ ಮಾಡಲಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಹಾಗು ಯಶ್ ಟಾಕ್ಸಿಕ್ ಸಿನಿಮಾವನ್ನ ಹಾಲಿವುಡ್ ಸಿನಿಮಾಗಳ ರೇಂಜ್‌ನಲ್ಲಿ ಕಟ್ಟಿಕೊಡೋದು ಪಕ್ಕಾ. ಈ ವಿಷಯವನ್ನ ಸ್ವತಹ ಯಶ್ ಹೇಳಿದ್ದಾರೆ. ಇಂಡಿಯನ್ ಸಿನಿಮಾ ಜಗತ್ತಲ್ಲಿ ಕೆಜಿಎಫ್ ಕ್ರಾಂತಿ ಮಾಡಿದ್ದ ಯಶ್ ಈಗ ವಿಶ್ವ ಸಿನಿ ಇಂಡಸ್ಟ್ರಿಯಲ್ಲಿ ಟಾಕ್ಸಿಕ್ ಕಿಕ್ ಕೊಡೋದಕ್ಕೆ ತಯಾರಾದ್ಮೇಲೆ ಅಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ ಟೆಕ್ನೀಷಿಯನ್ಸ್ ಬೇಕೇ ಬೇಕಲ್ವಾ. ಹೀಗಾಗೆ ಹಾಲಿವುಡ್ನ ಖ್ಯಾತ ವಿಎಫ್ಎಕ್ಸ್ ಕಂಪನಿ ಡಿಎನ್ಇಜಿ ಜೊತೆ ಟಾಕ್ಸಿಕ್ ಟೀಂ ಟೈಯಪ್ ಆಗಿದೆ. ಟಾಕ್ಸಿಕ್ನ ಅಂಪೂರ್ಣ ವಿಎಫ್ಎಕ್ಸ್ ಕೆಲಸವನ್ನ ಡಿಎನ್ಇಜಿ ಸಂಸ್ಥೆಯೇ ಮಾಡಿಕೊಡಲಿದೆ.

ಇದನ್ನೂ ವೀಕ್ಷಿಸಿ:  ಸೂರ್ಯ , ಜೂ.ಎನ್‌ಟಿಆರ್ ಜೊತೆ ಬಾಕ್ಸಾಫೀಸ್ ಫೈಟ್‌ಗಿಳಿದ ದ್ರುವ ಸರ್ಜಾ: ಮಾರ್ಟಿನ್ VS ಕಂಗುವ, ದೇವರ..ಗೆಲ್ಲೋರು ಯಾರು..?

Video Top Stories