Asianet Suvarna News Asianet Suvarna News

200 ಅಶ್ಲೀಲ ಮೆಸೇಜ್..ಖಾಕಿ ಮುಂದೆ ಪವಿತ್ರಾ ಹೇಳಿಕೆ !ಕಣ್ಣೀರಲ್ಲಿ ರೇಣುಕಾಸ್ವಾಮಿ ಕುಟುಂಬ, ಗರ್ಭಿಣಿ ಪತ್ನಿ!

ರೇಣುಕಾಸ್ವಾಮಿ ಕುಟುಂಬದ ಸಂಭ್ರಮಕ್ಕೆ ಸಮಾಧಿ..!
ಸಡಗರ ತುಂಬಿರಬೇಕಿದ್ದ ಮನೆಯಲ್ಲಿಂದು ಸೂತಕ..!
ರೇಣುಕಾಸ್ವಾಮಿ ನೆನೆದು ಕಣ್ಣೀರಿಟ್ಟ ತಂದೆ ತಾಯಿ..!

ಎಲ್ಲವೂ ಚೆನ್ನಾಗಿದ್ದಿದ್ರೆ ಆ ಮನೆಯಲ್ಲಿ ಸಂತೋಷ ಸಂಭ್ರಮ ಮನೆ ಮಾಡಿರ್ತಿತ್ತು. ಗರ್ಭಿಣಿ ಪತ್ನಿಯೊಂದಿಗೆ(Pregnant wife) ಮೊದಲ ವಾರ್ಷಿಕೋತ್ಸವವನ್ನ ಆಚರಿಸಿಕೊಂಡು ರೇಣುಕಾಸ್ವಾಮಿ (Renukaswamy) ಎಲ್ಲರಿಗೂ ಸಿಹಿ ಹಂಚ್ತಿದ್ದ. ಆದ್ರೆ ವಿಧಿಲಿಖಿತವೇ ಬೇರೆಯಾಗಿತ್ತು. ಮೊದಲ ವಾರ್ಷಿಕೋತ್ಸವ (Marriage anniversary) ಇನ್ನು 20 ದಿನ ಇರೋವಾಗಲೇ ದರ್ಶನ್ (Darshan) ಕೈಗೆ ಸಿಕ್ಕು ಕೊಲೆಯಾಗಿದ್ದ. ಆ ಮೂಲಕ ತನ್ನ ಕುಟುಂಬ, ಗರ್ಭಿಣಿ ಪತ್ನಿಗೆ ದುಖಃವನ್ನ ಕೊಟ್ಟು ಹೋಗಿದ್ದಾನೆ. ಮತ್ತೊಂದೆಡೆ ಇದೆಲ್ಲಾ ಆಗದೇ ಇದ್ದಿದ್ದರೆ ದರ್ಶನ್ ಇಷ್ಟೊತ್ತಿಗಾಗಲೇ ಶೂಟಿಂಗ್‌ನಲ್ಲಿ ದರ್ಬಾರ್ ನಡೆಸ್ತಿದ್ರು. ಆದ್ರೆ ಈಗ ಕೊಲೆ ಕೇಸ್‌ನಲ್ಲಿ(Renukaswamy murder case) ಜೈಲಿ ಸೇರಿದ್ದು.ಇತ್ತ ಸಂಭ್ರಮವೂ ಇಲ್ಲ. ಅತ್ತ ದರ್ಬಾರು ಇಲ್ಲದಂತಾಗಿದೆ. ಅದೊಂದು ದುರ್ಘಟನೆ ನಡೆಯದೇ ಹೋಗಿದ್ದರೆ. ಇಂದು ಚಿತ್ರದುರ್ಗದ ರೇಣುಕಾಸ್ವಾಮಿ ಮನೆಯಲ್ಲಿ ಸಡಗರ, ಸಂಭ್ರಮ ತುಂಬಿ ತುಳುಕಿರ್ತಿತ್ತು. ಮೊದಲ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರೇಣುಕಾಸ್ವಾಮಿ ಹಾಗೂ ಪತ್ನಿ ಸಹನಾ ಇರ್ಬೇಕಿತ್ತು. ಫಸ್ಟ್ ವೆಡ್ಡಿಂಗ್ ಆನಿವರ್ಸರಿಯನ್ನ ಆಚರಿಸಿಕೊಂಡು ನಮ್ಮ ದಾಂಪತ್ಯಕ್ಕೆ ಒಂದು ವರ್ಷ ಅಂತ ಸಂಭ್ರಮಿಸಿಕೊಳ್ಳಬೇಕಿತ್ತು.

ಇದನ್ನೂ ವೀಕ್ಷಿಸಿ:  ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ..ಬಸ್‌ ಆ್ಯಕ್ಸಿಡೆಂಟ್‌ನ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Video Top Stories