Asianet Suvarna News Asianet Suvarna News
breaking news image

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ..ಬಸ್‌ ಆ್ಯಕ್ಸಿಡೆಂಟ್‌ನ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

KSRTC ಬಸ್ ಎಕ್ಸ್ ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಬಿದ್ದಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
 

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್‌ವೊಂದು ಹಳ್ಳಕ್ಕೆ ಬಿದ್ದಿರುವ ಘಟನೆ ಮಂಡ್ಯ (Mandya) ತೂಬಿನಕೆರೆಯಲ್ಲಿ ನಡೆದಿದೆ. ಈ ಭೀಕರ ರಸ್ತೆ ಅಪಘಾತದ (Accident) ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. KSRTC ಬಸ್ ಎಕ್ಸ್ ಪ್ರೆಸ್ ವೇ ದಾಟಿ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ಹಳ್ಳಕ್ಕೆ ಬಿದ್ದಿದೆ. ಅತಿ ವೇಗವೇ ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ವೇಗವಾಗಿ ಬಂದಿದ್ದರಿಂದ ಬಸ್‌(Bus) ನಿಯಂತ್ರಣ ತಪ್ಪಿದೆ. ಡ್ರೈವರ್ ಶೇಖರ್ ಕಾಲು ಮುರಿತವಾಗಿದ್ದು, ದೀಪಕ್, ಭಾಸ್ಕರ್, ಅಭಿ, ಕುಶಾಲ್, ನಾಗರಾಜು ಸೇರಿ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ ಮಾಡಲಾಗಿದೆ. ಕಂಡಕ್ಟರ್ ರವಿಚಂದ್ರ ಎಂಬುವರಿಗೂ ಗಾಯವಾಗಿದೆ. ಕ್ರೇನ್ ಮೂಲಕ ಹಳ್ಳಕ್ಕೆ ಬಿದ್ದ ಬಸ್ ಮೇಲೆತ್ತಲಾಯಿತು. 

ಇದನ್ನೂ ವೀಕ್ಷಿಸಿ:  ರಾಜ್ಯ ರಾಜಕೀಯದಲ್ಲಿ ಹೇಗಿದೆ ಗೊತ್ತಾ ಸನ್ಯಾಸಿ ರಾಜ'ಕಾರಣ'..? ಖಾಲಿಯಿಲ್ಲದ ಸಿಎಂ ಕುರ್ಚಿಗಾಗಿ ಭುಗಿಲೆದ್ದ ಸಂಘರ್ಷ..!

Video Top Stories