Asianet Suvarna News Asianet Suvarna News

ರೋಗ ನಿರೋಧಕ ಬೇವಿನ ಮರಕ್ಕೇ ಅಂಟಿದ ರೋಗ..! ಅರಣ್ಯ ಸಚಿವರ ತವರಲ್ಲೇ ಅರಣ್ಯರೋಧನ..!

ಅರಣ್ಯ ಸಚಿವರ ತವರು ಜಿಲ್ಲೆಯಲ್ಲೇ ಅರಣ್ಯ ಸಂಪತ್ತಿಗೆ ಕುತ್ತುಂಟಾಗಿದೆ. ಬೇವಿನ ಮರಕ್ಕೆ ಹೊಸ ರೋಗ ಅಂಟಿಕೊಂಡಿದೆ. ಜಿಲ್ಲೆಯಾದ್ಯಂತ ಬೇವಿನ ಮರಗಳು ಒಣಗಿ ಹೋಗ್ತಿವೆ.
 

ಒಣಗಿ ನಿಂತಿರೋ ಸಾಲು ಸಾಲು ಬೇವಿನ ಮರಗಳು. ಎಲ್ಲಿ ನೋಡಿದ್ರು ಹಸಿರು ಕಣ್ಮರೆ. ಈ ದೃಶ್ಯ ಕಂಡು ಬಂದಿದ್ದು ಅರಣ್ಯ ಸಚಿವರ ತವರೂರು ಬೀದರ್(Bidar) ಜಿಲ್ಲೆಯಲ್ಲಿ. ಒಂದಲ್ಲ, ಎರಡಲ್ಲ ಬೀದರ್ ಜಿಲ್ಲೆಯಲ್ಲಿ ಕೋಟ್ಯಾಂತರ ಬೇವಿನ ಮರಗಳು(Neem Trees) ಒಣಗಿ ಹೋಗ್ತಿವೆ. ಹಲವು ರೋಗಗಳಿಗೆ ಮದ್ದೆರಯುವ ಬೇವಿನ ಮರಕ್ಕೇ ರೋಗ(disease) ಅಂಟಿರೋದು, ಪರಿಸರ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಬೀದರ್‌ನ ಯುವಕರ ತಂಡವೊಂದು ಸರ್ಕಾರ ಮತ್ತು ಕೃಷಿ ಇಲಾಖೆ ವಿಜ್ಞಾನಿಗಳ ಕಣ್ತೆರೆಸಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬೇವಿನ ಮರಕ್ಕೆ ಅಂಟಿರುವ ರೋಗದ ಕುರಿತು ಅಭಿಯಾನ ಆರಂಭಿಸಿದ್ದಾರೆ. ಬೇವಿನ ಮರಗಳ ಎಲೆ ಮಾತ್ರವಲ್ಲ, ಬುಡದಿಂದ ಕೊಂಬೆವರೆಗೂ ಸಂಪೂರ್ಣ ಒಣಗಿ ಹೋಗ್ತಿವೆ. ಈ ಕೂಡಲೇ ಕೃಷಿ ಇಲಾಖೆ ಎಚ್ಚೆತ್ತು, ಮರಗಳನ್ನು ಉಳಿಸಬೇಕು, ಬೇವಿನ ಮರಕ್ಕೆ ರೋಗ ಅಂಟಲು ಕಾರಣ ಹುಡುಕಿ, ಜನರ ಆತಂಕ ದೂರ ಮಾಡಬೇಕೆಂದು ಟೀಂ ಯುವ ತಂಡ ಒತ್ತಾಯಿಸಿದೆ. ಬೇವಿನಮರಗಳು ಕೀಟ ಭಾದೆಯಿಂದ ಒಣಗುತ್ತಿವೆ ಎಂದು ಕೃಷಿ ವಿಜ್ಞಾನಿ ಡಾ.ಸುನೀಲ್ ಕುಮಾರ್ ಹೇಳ್ತಿದ್ದಾರೆ.ಔಷಧಿಗಳ ಮೂಲವಾಗಿರುವ ಬೇವಿನ ಮರವೇ ರೋಗಗ್ರಸ್ತವಾಗಿದ್ದು ದುರಂತ. ಜಿಲ್ಲೆಯಲ್ಲಿ ಬೇವಿನ ಮರದ ಸಂತತಿ ಸಂಪೂರ್ಣ ಅಳಿಸಿ ಹೋಗುವ ಮುನ್ನ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಬೇಕು ಅನ್ನೋದು ಪರಿಸರ ಪ್ರೇಮಿಗಳ ಒತ್ತಾಯ.

ಇದನ್ನೂ ವೀಕ್ಷಿಸಿ:  ಹಿಂದೂ ದೇಗುಲ ಕಟ್ಟಿಸಿದ ಮುಸ್ಲಿಂ ಯುವಕ: ಗಾಳೆಮ್ಮ ದೇವಸ್ಥಾನ ನಿರ್ಮಾಣ ಮಾಡಿದ ಇಮಾಮ್‌ ಸಾಬ್‌ !

Video Top Stories