Asianet Suvarna News Asianet Suvarna News

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಬೆಂಬಲಿಗರಿಗೂ ಉರುಳಾಗುತ್ತಾ ಈ ಪ್ರಕರಣ..?

ತಾವೇ ಬೆಳೆಸಿದ ಆಪ್ತರ ನಡೆಗಳೇ ಸಿಎಂಗೆ ಕಂಟಕವಾಗುತ್ತಾ..?
ಸಿಎಂ ಜೊತೆಗೆ ಆಪ್ತರಿಗೂ ಕಂಟಕವಾಗುತ್ತಾ ಮೂಡಾ ಹಗರಣ?
ಮುಡಾ ಹಗರಣದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ 
 

First Published Jul 7, 2024, 11:23 AM IST | Last Updated Jul 7, 2024, 11:24 AM IST

ಸಿದ್ದರಾಮಯ್ಯ ಸರ್ಕಾರಕ್ಕೆ ಮುಡಾ ಹಗರಣ(Muda scam) ತಲೆನೋವಾಗಿದೆ. ಬಗೆದಷ್ಟು ಹರಡಿಕೊಳ್ತಾನೆ ಇದೆ ಮುಡಾ ಬ್ರಹ್ಮಾಂಡ ಭ್ರಷ್ಟಾಚಾರ. ಸಿಎಂ ಹೊರತುಪಡಿಸಿ ಹಿಂಬಾಲಕರ ಎದೆಯಲ್ಲೂ ಇದೀಗ ಢವಢವ ಶುರುವಾಗಿದೆ. ಇಲ್ಲಿವರೆಗೆ ಕೇವಲ ಸಿಎಂ(Siddaramaiah) ಮತ್ತವರ ಕುಟುಂಬದ ಹೆಸರು ಮಾತ್ರ ಪ್ರಸ್ತಾಪವಾಗಿತ್ತು. ಇದೀಗ ಸಿದ್ದರಾಮಯ್ಯ ಆಪ್ತರ ಹೆಸರೂ ಹಗರಣದಲ್ಲಿ ತಳುಕು ಹಾಕಿಕೊಂಡಿದೆ. ಸಚಿವ ಭೈರತಿ ಸುರೇಶ್, ಮಾಜಿ ಸಚಿವ ಎಸ್.ಟಿ ಸೋಮಶೇಖರ್ , ಮುಡಾ ಮಾಜಿ ಅಧ್ಯಕ್ಷ ಎಚ್.ವಿ ರಾಜೀವ್(HV Rajiv) ಹೆಸರು ಹಗರಣದಲ್ಲಿ ತಳುಕು ಹಾಕಿಕೊಂಡಿದೆ. 2021ರಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಸ್.ಟಿ.ಸೋಮಶೇಖರ್, ಆ ಸಮಯದಲ್ಲಿ ಮಾರ್ಪಾಡಾಗಿರುವ 50-50 ಅನುಪಾತ. ಬಿಜೆಪಿ(BJP) ಸರ್ಕಾರದಲ್ಲಿ ಮುಡಾ ಅಧ್ಯಕ್ಷ ಆಗಿದ್ದ ಎಚ್‌.ವಿ.ರಾಜೀವ್, ರಾಜೀವ್ ಕಾಲದಲ್ಲೂ ಹಲವು ಪ್ರಕರಣದಲ್ಲಿ 50-50 ಅನುಪಾತ ಅನುಸರಣೆ ಆಗಿದೆಯಂತೆ. ಈಗ ಬಿಜೆಪಿಗೆ ಗುಡ್‌ ಬೈ ಹೇಳಿ ಕಾಂಗ್ರೆಸ್ ಸೇರಿರುವ ರಾಜೀವ್. ಸಿಎಂ ಆಪ್ತ, ಸಚಿವ ಭೈರತಿ ಸುರೇಶ್ ಹಾಲಿ ನಗರಾಭಿವೃದ್ಧಿ ಸಚಿವರಾಗಿದ್ದು, 2024ರ ಜೂನ್‌ವರೆಗೂ 50-50‌ ಅನುಪಾತದಲ್ಲಿ ಹಲವರಿಗೆ ಸೈಟ್ ಹಂಚಿಕೆ ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಸಿಎಂ ಪರಮಾಪ್ತ ಹಿನಕಲ್ ಪಾಪಣ್ಣ ಹೆಸರು ತಳುಕು ಹಾಕಿಕೊಂಡಿದೆ.

ಇದನ್ನೂ ವೀಕ್ಷಿಸಿ:  ಸೂಟ್‌ಕೇಸ್‌ ತುಂಬ ಕೋಟಿ ಕೋಟಿ ಹಣದ ಕಂತೆ..! ಎಲ್ಲವನ್ನೂ ಹೊತ್ತುಕೊಂಡು ಹೋದ ರಶ್ಮಿಕಾ ಮಂದಣ್ಣ!