Asianet Suvarna News Asianet Suvarna News

ಸೂಟ್‌ಕೇಸ್‌ ತುಂಬ ಕೋಟಿ ಕೋಟಿ ಹಣದ ಕಂತೆ..! ಎಲ್ಲವನ್ನೂ ಹೊತ್ತುಕೊಂಡು ಹೋದ ರಶ್ಮಿಕಾ ಮಂದಣ್ಣ!

ಸೂಟ್‌ಕೇಸ್‌ ತುಂಬ ಕೋಟಿ ಕೋಟಿ ಹಣದ ಕಂತೆ..!
ಎಲ್ಲವನ್ನೂ ಹೊತ್ತುಕೊಂಡು ಹೋದ ನಟಿ ರಶ್ಮಿಕಾ !
'ಕುಬೇರ' ಸಿನಿಮಾದಲ್ಲಿ ನಟಿ ರಶ್ಮಿಕಾಗೆ ಸಿಕ್ತು ಹಣ..!

ರಶ್ಮಿಕಾ ಒಂದ್ ಸಿನಿಮಾಗೆ ಪಡೆಯೋ ಸಂಬಳ ಈಗ 10 ಕೋಟಿ ದಾಟಿದೆ. ರಶ್ಮಿಕಾ(Rashmika Mandanna) ಬಳಿ ಸಾಲು ಸಾಲು ಸಿನಿಮಾಗಳಿವೆ. ಆದ್ರೆ ಶ್ರೀವಲ್ಲಿಗೆ ದುಡ್ಡಿನ ಆಸೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಕಾಡಲ್ಲಿ ಸಿಕ್ಕ ಸೂಟ್ಕೇಸ್(Suitcase) ತುಂಬಾ ಕೋಟಿ ಕೋಟಿ ಹಣದ ಕಂತೆ ನೋಡಿದ ರಶ್ಮಿಕಾ ಎಲ್ಲವನ್ನ ಹೊತ್ತುಕೊಂಡು ಓಡಿದ್ದಾರೆ. ರಶ್ಮಿಕಾ ಮಂದಣ್ಣ ಸೂಟ್‌ಕೇಸ್‌ನಲ್ಲಿದ್ದ ಕೋಟಿ ಹಣವನ್ನ ಎತ್ತಿಕೊಂಡು ಹೋಗಿದ್ದು ಎಲ್ಲಿ ಗೊತ್ತಾ.? ಈ ಲಿಲ್ಲಿ ಕುಬೇರ (Kubera First Look) ಅನ್ನೋ ಸಿನಿಮಾದಲ್ಲಿ ನಟಿಸಿತ್ತಿದ್ದಾರೆ. ಕುಬೇರ ನಟ ಧನುಷ್(Dhanush) ಅಭಿನಯಿಸುತ್ತಿರೋ ಕ್ರೈಂ ಥ್ರಿಲ್ಲರ್ ಸಿನಿಮಾ. ಈ ಸಿನಿಮಾ ಶೀರ್ಷಿಕೆಯೇ ಹೇಳುವಂತೆ ಇದು ಮನಿ ಮ್ಯಾಟರ್ ಸ್ಟೋರಿಯ ಮೂವಿ. ರಶ್ಮಿಕಾ ಫಾಲೋವರ್ಸ್ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟಿದ್ದಾರೆ. ಆ ನಿರೀಕ್ಷೆ ಹೆಚ್ಚು ಮಾಡುವ ರಶ್ಮಿಕಾ ಫಸ್ಟ್ ಲುಕ್ ರಿಲೀಸ್ ಆಗಿದೆ. ಶೇಖರ್ ಕಮ್ಮುಲ ನಿರ್ದೇಶನ ಮಾಡುತ್ತಿರೋ ಕುಬೇರ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಧನುಷ್ ಜೊತೆ ಅಕ್ಕಿನೇನಿ ನಾಗಾರ್ಜುನ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಸಧ್ಯ ಕುಬೇರ ಸಿನಿಮಾ ಚಿತ್ರೀಕರಣ ಹಂತದಲ್ಲಿದೆ.

ಇದನ್ನೂ ವೀಕ್ಷಿಸಿ:  ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಗೌಡಗೆ ಫುಲ್ ಕ್ಲಾಸ್! ರೀಲ್ಸ್‌ಗಾಗಿ ಗಂಡನನ್ನೇ ಬಿಟ್ಟ ಮಹಾನ್ ತ್ಯಾಗಿಯಂತೆ !