Asianet Suvarna News Asianet Suvarna News

ನಂಬಿದ್ರೆ ನಂಬಿ! ಶಿವಮೊಗ್ಗದಲ್ಲಿ ಕಪಿಚೇಷ್ಟೆ ಮಾಡಿದ 70 ಮಂಗಗಳು ಅರೆಸ್ಟ್!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾಮದಲ್ಲಿ ಸುಮಾರು 70 ಮಂಗಗಳನ್ನ ಹಿಡಿದು ಬೋನಿನಲ್ಲಿ ತುಂಬಿಸಿ ಗ್ರಾಮ ಪಂಚಾಯಿತಿ ಕಟ್ಟೆಯ ಮೇಲೆ  ಬಿಟ್ಟು ಹೋದ ಘಟನೆ ನಡೆದಿದೆ.  

ಇದು ಮಂಗಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆನಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಂಗನ ಹಾವಳಿ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿಯೇ ಇಂತಹದ್ದೊಂದು ಘಟನೆ ನಡೆದಿದ್ದು, ಗ್ರಾಮಸ್ಥರು ಮಂಗನ ಹಾವಳಿಯಿಂದ ರೋಸಿ ಹೋಗಿ ಇಂತಹ ಕೃತ್ಯಕ್ಕೆ ಕೈ ಹಾಕಿದರಾ ಎಂಬ ಅನುಮಾನ ವ್ಯಕ್ತವಾಗಿದೆ. 

ಶಿವಮೊಗ್ಗ (ನ.18): ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅರಳಸುರಳಿ ಗ್ರಾಮದಲ್ಲಿ ಸುಮಾರು 70 ಮಂಗಗಳನ್ನ ಹಿಡಿದು ಬೋನಿನಲ್ಲಿ ತುಂಬಿಸಿ ಗ್ರಾಮ ಪಂಚಾಯಿತಿ ಕಟ್ಟೆಯ ಮೇಲೆ  ಬಿಟ್ಟು ಹೋದ ಘಟನೆ ನಡೆದಿದೆ.  

ಇದು ಮಂಗಗಳ ವಿರುದ್ಧ ಗ್ರಾಮಸ್ಥರ ಪ್ರತಿಭಟನೆನಾ? ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಮಂಗನ ಹಾವಳಿ ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿದೆ ಎಂಬ ಮಾತು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿಯೇ ಇಂತಹದ್ದೊಂದು ಘಟನೆ ನಡೆದಿದ್ದು, ಗ್ರಾಮಸ್ಥರು ಮಂಗನ ಹಾವಳಿಯಿಂದ ರೋಸಿ ಹೋಗಿ ಇಂತಹ ಕೃತ್ಯಕ್ಕೆ ಕೈ ಹಾಕಿದರಾ ಎಂಬ ಅನುಮಾನ ವ್ಯಕ್ತವಾಗಿದೆ. 

ಇದನ್ನೂ ನೋಡಿ | ರಸ್ತೆ ಮಧ್ಯದಲ್ಲೇ ಏಕಾ ಏಕಿ ಪ್ರತ್ಯಕ್ಷವಾದ ನಾಗರ ಹುತ್ತ...

ನಿನ್ನೆಯಿಂದ ಗ್ರಾಮಸ್ಥರು ಇಂತಹ ಕೆಲಸಕ್ಕೆ ಕೈ ಹಾಕಿದ್ದಾರೆನ್ನಲಾಗಿದ್ದು ಗ್ರಾಮ ಪಂಚಾಯಿತಿ ಪಿಡಿಒ ಆಗಲಿ ಅಥವಾ ಅರಣ್ಯ ಅಧಿಕಾರಿಗಳಿಗೆ ಈ ಮಾಹಿತಿ ಇಲ್ಲ. ವಿಷಯ ತಿಳಿದು ಅರಳಸುರಳಿಗೆ ಧಾವಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಂಗಗಳ ಬೋನು ತೆಗೆದುಕೊಂಡು ಹೋಗಿ ಆಗುಂಬೆ ಘಾಟಿ ಬಳಿ ಬಿಟ್ಟಿದ್ದಾರೆ. 

ಬೋನಿನಲ್ಲಿದ್ದ ಮಂಗಗಳ ಮರಿಗಳಿಗೆ ಬಿಸ್ಕತ್ ಮೊದಲಾದ ಆಹಾರ ನೀಡಲಾಗಿತ್ತು. ಕೆಲವು ಮಂಗಗಳು ಸರಿಯಾದ ಆಹಾರ ಸಿಗದೇ ಅಸ್ವಸ್ಥವಾಗಿದ್ದನ್ನು ಅರಣ್ಯ ಇಲಾಖೆಯ ಮೂಲಗಳು ನಿರಾಕರಿಸಿವೆ.

Video Top Stories