"

ಶಿವಮೊಗ್ಗ [ನ.16]: ರಸ್ತೆಯಲ್ಲಿ ಬಿದ್ದಿರುವ ಗುಂಡಿಯನ್ನ ಮುಚ್ಚಲು ವಿನೂತನ ರೀತಿಯಲ್ಲಿ ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಈ ಪ್ರತಿಭಟನೆಯ ಫೊಟೊ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. 

ಮಿಲನದ ಬಳಿಕ ಸಂಗಾತಿಯನ್ನೇ ತಿನ್ನುವ ಕಾಳಿಂಗ! ಕಾರಣವೇನು?...

ಶಿವಮೊಗ್ಗದ ಜೈಲ್ ರಸ್ತೆಯಲ್ಲಿ ಇಂದು ಬೆಳಿಗ್ಗೆ ಗುಂಡಿ ತೆಗೆದು ಅದನ್ನ ಮುಚ್ಚಿ ಅದರ ಮೇಲೆ ಕಬ್ಬಿಣದ ರಾಡನ್ನ ನೆಟ್ಟು ರಾಜಕೀಯದ ಕೊಡುಗೆ ಬದಲಾವಣೆಗಾಗಿ ಎಂದು ಫಲಕ ಹಾಕಲಾಗಿದೆ. ಅದರ ಕೆಳಗೆ ಎರಡು ಪ್ಲಾಸ್ಟಿಕ್ ಹಾವುಗಳನ್ನ ಇಡಲಾಗಿದೆ. ಸುತ್ತ ಹೂವಿನ ಮಾಲೆ ಹಾಕಿ ಊದು ಬತ್ತಿಯನ್ನ ಹಚ್ಚಲಾಗಿದೆ.  

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!...

 ಇದನ್ನ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದರ ವಿಡಿಯೋ ಮತ್ತು ಪೋಟೋ ತೆಗೆದ ಬಳಿಕ ಕೇವಲ ಗುಂಡಿಯನ್ನು ಬಿಟ್ಟು ಉಳಿದೆಲ್ಲ ಪರಿಕರ ಅಲ್ಲಿದ್ದ ಕುರುಹು ಇಲ್ಲದಂತೆ ಮಾಡಲಾಗಿದ್ದು ಸಾರ್ವಜನಿಕರ ಕುತೂಹಲ ಕೆರಳಿಸಿದೆ.