ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸಚಿವರ ವಿರುದ್ಧ ಅಪಸ್ವರ: ಸಿಎಂ ಮುಂದೆ ಅನುದಾನಕ್ಕೆ ಬಿಗಿಪಟ್ಟು ಹಿಡಿದ ಶಾಸಕರು!
ಗ್ಯಾರಂಟಿ ಕಾರಣದಿಂದ ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕರ ಬೇಸರ
ಅಭಿವೃದ್ಧಿಗೆ ಅನುದಾನ ಕೇಳಿದ್ರೆ ಶಾಸಕರ ಮನವಿಗಳಿಗೆ ಬೆಲೆ ನೀಡುತ್ತಿಲ್ಲ
ಕ್ಷೇತ್ರದಲ್ಲಿ ಜನರಿಗೆ ಮುಖ ತೋರಿಸೋದು ಕಷ್ಟವಾಗ್ತಿದೆ ಎಂದು ಸಿಟ್ಟು
ಕಾಂಗ್ರೆಸ್ ಸರ್ಕಾರದಲ್ಲಿ(Congress government) ಮತ್ತೆ ಸಚಿವರು(Ministers) ವರ್ಸಸ್ ಶಾಸಕರ(MLAs) ನಡುವೆ ಸಮರ ಶುರುವಾಗಿದೆ. ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ(Congress legislative meeting ) ಸಚಿವರ ವಿರುದ್ಧ ಅಪಸ್ವರ ಕೇಳಿಬಂದಿದೆ. ಅನುದಾನಕ್ಕೆ ಸಿಎಂ ಮುಂದೆ ಬಿಗಿಪಟ್ಟು ಹಿಡಿದು ಶಾಸಕರು ಆಗ್ರಹಿಸಿದ್ದಾರೆ. ಅನುದಾನ ಬಿಡುಗಡೆಗೆ ನೀವೇ ಖುದ್ದಾಗಿ ಹೇಳಿ ಎಂದು ಸಿಎಂಗೆ ಒತ್ತಡ ಹಾಕುತ್ತಿದ್ದಾರೆ. ಅನುದಾನ ಇಲ್ಲದೆ ಹೋದರೆ ಕ್ಷೇತ್ರಕ್ಕೆ ಕಾಲಿಡುವುದು ಕಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರಂತೆ. ಅನುದಾನಕ್ಕಾಗಿ ಒಂದು ವರ್ಷದಿಂದ ಕಾದಿದ್ದೇವೆ. ಇನ್ನಷ್ಟು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅನುದಾನ ಇಲ್ಲದಿದ್ದರೆ ಕ್ಷೇತ್ರದಲ್ಲಿ ಓಡಾಡುವುದು ಕಷ್ಟ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರಂತೆ. ಎಷ್ಟೇ ಬಾರಿ ಹೇಳಿದರೂ ಸಚಿವರ ವರ್ತನೆ ಬದಲಾಗಿಲ್ಲ. ಕೆಲವು ಸಚಿವರನ್ನ ತಕ್ಷಣ ಸಂಪುಟದಿಂದ ಕೈ ಬಿಡುವುದು ಒಳ್ಳೆಯದು ಎಂದು ಸಚಿವರ ವಿರುದ್ಧ ಶಾಸಕಾಂಗ ಸಭೆಯಲ್ಲಿ ಕೆಲವು ಶಾಸಕರು ಅಪಸ್ವರ ಎತ್ತಿದ್ದಾರೆ. ಗ್ಯಾರಂಟಿ ಯೋಜನೆಗಳ ವಿರುದ್ಧವೂ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರಹಾಕಿದ್ದು, ಗ್ಯಾರಂಟಿ ಕಾರಣದಿಂದ ಶಾಸಕರಿಗೆ ಅನುದಾನ ಸಿಕ್ತಿಲ್ಲ. ಲೋಕಸಭಾ ಹಿನ್ನಡೆ ನಂತರ ಗ್ಯಾರಂಟಿ ವಿರುದ್ಧ ಶಾಸಕರ ನಿಲುವು ಬದಲಾದಂತೆ ಕಾಣುತ್ತಿದೆ.
ಇದನ್ನೂ ವೀಕ್ಷಿಸಿ: ಹಾವೇರಿಯಲ್ಲಿ ನಿರಂತರ ಮಳೆ.. ಮೂವರು ಸಾವು, ಮೂವರಿಗೆ ಗಂಭೀರ ಗಾಯ