ಹಾವೇರಿಯಲ್ಲಿ ನಿರಂತರ ಮಳೆ.. ಮೂವರು ಸಾವು, ಮೂವರಿಗೆ ಗಂಭೀರ ಗಾಯ

ಮನೆ‌ ಗೋಡೆ ಕುಸಿದ ಪರಿಣಾಮ ಮೂವರು ಸಾವಿಗೀಡಾಗಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರ್ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

First Published Jul 19, 2024, 11:22 AM IST | Last Updated Jul 19, 2024, 11:23 AM IST


ಹಾವೇರಿ: ಜಿಲ್ಲೆಯಲ್ಲಿ ನಿರಂತರ ಮಳೆ (Rain) ಹಿನ್ನೆಲೆ ಮನೆ‌ ಗೋಡೆ ಕುಸಿದ ಪರಿಣಾಮ ಮೂವರು ಸಾವಿಗೀಡಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಮಳೆಗೆ ಮೂವರು ಬಲಿಯಾಗಿದ್ದಾರೆ. ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದ ಮೂವರು ಸಾವಿಗೀಡಾಗಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಸುಮಾರು 30 ವರ್ಷದ ಚೆನ್ನಮ್ಮ ಹಾಗೂ ಅಮೂಲ್ಯ ಮತ್ತು ಅನುಶ್ರಿ ಎಂಬ ಎರಡು ಎಳೆಯ ಕಂದಮ್ಮಗಳು ಸಾವಿಗೀಡಾಗಿವೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗ್ತಿರೋ ಹಿನ್ನಲೆ ನಿರಂತರ ಮಳೆಗೆ ಮನೆ ಗೋಡೆ ಕುಸಿದು ಸಾವಿಗೀಡಾಗಿದ್ದಾರೆ. ಇಂದು‌ ನಸುಕಿನ ಜಾವ ಸುಮಾರು 3.30ಕ್ಕೆ ಈ ದುರ್ಘಟನೆ ನಡೆದಿದೆ. ಮನೆಯಲ್ಲಿ ಒಟ್ಟು 6 ಜನ ವಾಸವಾಗಿದ್ರು, ಮನೆ ಗೋಡೆಗಳು ಕುಸಿದ ಹಿನ್ನೆಲೆ ಮನೆಯಲ್ಲಿ ಮಲಗಿದ್ದ (House collapsed) ಆರು ಜನರ ಮೇಲೆ ಗೋಡೆಗಳು ಬಿದ್ದಿವೆ. ನೆರೆ ಹೊರೆಯವರಿಂದ ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ನಡೆದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವಿಗೀಡಾಗಿದ್ದಾರೆ (Died). ವಯೋವೃದ್ದೆ ಯಲ್ಲಮ್ಮ ಹಾಗೂ ಅವರ ಪುತ್ರ ಮುತ್ತು ಮತ್ತು  ಸೊಸೆ ಸುನೀತಾಗೆ ಗಂಭೀರ ಗಾಯವಾಗಿದೆ. ಸವಣೂರು ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ಡಿವೋರ್ಸ್ ಪೋಸ್ಟ್‌ಗೆ ಅಭಿಷೇಕ್ ಬಚ್ಚನ್ ಲೈಕ್ಸ್..! ಐಶ್ವರ್ಯಗೆ ವಿಚ್ಛೇಧನ ಕೊಡೋಕೆ ರೆಡಿಯಾದ್ರಾ ಅಭಿಷೇಕ್..?

Video Top Stories