ಬಂಧನ ಭೀತಿಯಲ್ಲಿ ಬಸನಗೌಡ ದದ್ದಲ್‌: ಅರೆಸ್ಟ್‌ನಿಂದ ಪಾರಾಗಲು ಶಾಸಕರಿಗೆ ಇರುವ ಅವಕಾಶ ಏನು ?

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಅವ್ಯವಹಾರ ಪ್ರಕರಣ
ಇಡಿ ಅಧಿಕಾರಿಗಳ ತನಿಖೆಯಲ್ಲಿ ಮಾಜಿ ಸಚಿವ ನಾಗೇಂದ್ರ ವಿಲವಿಲ..!
ಇಡಿ ಅಧಿಕಾರಿಗಳ ತನಿಖೆ ಬಿಸಿ ತಾಳಲಾಗದೇ ಕೋರ್ಟ್ ಗೆ ಅರ್ಜಿ ಸಲ್ಲಿಕೆ

Share this Video
  • FB
  • Linkdin
  • Whatsapp

ಮಹರ್ಷಿ ವಾಲ್ಮೀಕಿ ನಿಗಮದಲ್ಲಿ 187 ಕೋಟಿ ಹಗರಣ ನಡೆದ ಪ್ರಕರಣಕ್ಕೆ (Valmiki Corporation Scam) ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿ ಶಾಸಕ ಬಸನಗೌಡ ದದ್ದಲ್ ಇದ್ದಾರೆ. ಬಂಧನದಿಂದ ಪಾರಾಗಲು ಶಾಸಕ ಬಸನಗೌಡ ದದ್ದಲ್ (MLA Basanagowda Daddal) ಮಾಸ್ಟರ್ ಪ್ಲ್ಯಾನ್‌ ಮಾಡಿದ್ದು, ಒಂದು ಕಡೆ ವಿಧಾನಸಭೆ ಅಧಿವೇಶನ (Assembly session) ಮತ್ತೊಂದೆಡೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಇಂದು ದದ್ದಲ್ ಪರ ವಕೀಲರಿಂದ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದ್ದು, ಈ ಮೂಲಕ ಇ.ಡಿ ಬಂಧನದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನಾಪತ್ತೆಯಾಗಿದ್ದ ದದ್ದಲ್ ನಿನ್ನೆ ವಿಧಾನಸೌಧದಲ್ಲಿ ಪತ್ತೆಯಾಗಿದ್ದರು.

ಇದನ್ನೂ ವೀಕ್ಷಿಸಿ:  ಚರ್ಚೆಗೆ ಸಿದ್ಧ..ವಿಪಕ್ಷಗಳಿಗೆ ನೈತಿಕತೆ ಇದ್ಯಾ ಎಂದ ಸಿಎಂ: ವಾಲ್ಮೀಕಿ ಹಗರಣದ ಚರ್ಚೆಗೆ ಪಟ್ಟು ಹಿಡಿದ ಬಿಜೆಪಿ ನಾಯಕರು !

Related Video