ಬಸ್‌ ಸರಿಯಿಲ್ಲ.. ರಿಪೇರಿ ಮಾಡಿ ಕೊಡಿ ಎಂದ ಚಾಲಕ: ಇದಕ್ಕೆ ಮ್ಯಾನೇಜರ್ ಹೇಳಿದ್ದೇನು ..?

ಸಕಲೇಶಪುರ ಡಿಪೋದಲ್ಲಿ ಇರೋದೆಲ್ಲಾ ಗುಜರಿ ಬಸ್‌ಗಳಾ ಎಂಬ ಅನುಮಾನ ಈಗ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತಿದೆ ಡಿಪೋ ಮ್ಯಾನೇಜರ್‌ ಜಗನ್ನಾಥ್‌ ಮಾತು.
 

Share this Video
  • FB
  • Linkdin
  • Whatsapp

ಹಾಸನ: ಸಕಲೇಶಪುರ ಡಿಪೋದಲ್ಲಿ(Sakleshpur) ಇರುವವೆಲ್ಲಾ ಗುಜರಿ ಬಸ್‌ಗಳೇ, ಅವನ್ನೇ ಓಡಿಸು ಎಂದು ಮ್ಯಾನೇಜರ್‌ ಚಾಲಕನಿಗೆ ಹೇಳಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್‌ ಆಗುತ್ತಿದೆ. ಮ್ಯಾನೇಜರ್‌ ಜಗನ್ನಾಥ್‌ (manager jagannath)ಈ ಮಾತು ಸದ್ಯ ಎಲ್ಲರಲ್ಲಿ ಆತಂಕವನ್ನು ಮೂಡಿಸಿದೆ. ಬಸ್‌ ಸರಿಯಿಲ್ಲ ಸರಿ ಮಾಡಿಸಿಕೊಡಿ ಎಂದು ಚಾಲಕ ಮ್ಯಾನೇಜರ್‌ ಬಳಿ ಕೇಳಿದ್ದಾನೆ. ಇದಕ್ಕೆ ಮ್ಯಾನೇಜರ್‌ ಚಾಲಕನ(Bus driver) ವಿರುದ್ಧವೇ ಕಿಡಿಕಾರಿದ್ದು, ಅದನ್ನೇ ಓಡಿಸು ಎಂದಿದ್ದಾರೆ. ಒಂದು ವೇಳೆ ಈ ಬಸ್‌ಗಳಲ್ಲಿ ಸಂಚರಿಸುವವರಿಗೆ ತೊಂದರೆಯಾದ್ರೆ ಯಾರು ಹೊಣೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇಲ್ಲಿ ಇರುವವು ಹಳೆ ಗಾಡಿಗಳೇ, ಅವನ್ನೇ ಕಟ್ಟಿಕೊಂಡು ನಾನು ಡಿಪೋ ನಡೆಸುತ್ತಿದ್ದೇನೆ ಎಂದು ಮ್ಯಾನೇಜರ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಪುನರ್ವಸತಿ ಕೇಂದ್ರಕ್ಕೆ ಹೋಗುವ ಮುನ್ನ ಎಚ್ಚರ: ಕುಡಿತದ ಚಟಕ್ಕೆ ಬಿದ್ದವರೇ ಹುಷಾರ್‌..!

Related Video