ಪುನರ್ವಸತಿ ಕೇಂದ್ರಕ್ಕೆ ಹೋಗುವ ಮುನ್ನ ಎಚ್ಚರ: ಕುಡಿತದ ಚಟಕ್ಕೆ ಬಿದ್ದವರೇ ಹುಷಾರ್‌..!

ಪ್ರವೀಣ್‌ ಎಂಬುವವರ ಕುಡಿತದ ಚಟ ಬಿಡಿಸಬೇಕು ಎಂಬ ಕಾರಣದಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿಸಲಾಗಿತ್ತು. ಆದ್ರೆ ಅವರು ಈಗ ಕೈ-ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಬೆಂಗಳೂರು: ಕುಡಿತದ ಚಟಕ್ಕೆ ಬಿದ್ದವರು ಒಮ್ಮೆ ಈ ಸ್ಟೋರಿಯನ್ನು ನೋಡಿ. ನೀವೆನಾದ್ರು ಕುಡಿತದ ಚಟ ಬಿಡಬೇಕೆಂದುಕೊಂಡು ಪುನರ್ವಸತಿ ಕೇಂದ್ರಕ್ಕೆ ಹೋಗುತ್ತಿದ್ದರೆ ಹುಷಾರ್‌. ಯಾಕೆಂದರೆ ನೀವು ಅಲ್ಲಿಂದ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಬರಬಹುದು. ಹೌದು, ಬೆಂಗಳೂರಿನಲ್ಲಿ ಕುಡಿತದ ಚಟ(Alcohol addiction) ಬಿಡಬೇಕೆಂದುಕೊಂಡು ಪುನರ್ವಸತಿ ಕೇಂದ್ರಕ್ಕೆ( rehabilitation center) ಹೋದ ವ್ಯಕ್ತಿಯೊಬ್ಬರು ಎರಡೇ ದಿನಕ್ಕೆ ಆಸ್ಪತ್ರೆ(Hospital) ಪಾಲಾಗಿದ್ದಾರೆ. ಪ್ರವೀಣ್‌ ಎಂಬುವವರ ಮೇಲೆ ಪುನರ್ವಸತಿ ಕೇಂದ್ರದ ಸಿಬ್ಬಂದಿ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಅವರು ಕೈ-ಕಾಲು ಸ್ವಾಧೀನ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾರೆ. ಸದ್ಯ ಕುಟುಂಬಸ್ಥರು ಪುನರ್ವಸತಿ ಕೇಂದ್ರದ ವಿರುದ್ಧ ದೂರನ್ನು ನೀಡಿದ್ದಾರೆ. ಸಿಬ್ಬಂದಿ ನಿರಂತರವಾಗಿ ಮೂರು ದಿನ ಹೊಡೆದಿದ್ದಾರೆ ಎಂದು ಪ್ರವೀಣ್‌ ಆರೋಪ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಆಸ್ಪತ್ರೆಯಲ್ಲಿ ಸಾಮಾಜಿಕ ಕಾರ್ಯಕರ್ತನ ದರ್ಬಾರ್‌: ವೈದ್ಯರು, ನರ್ಸ್‌ಗಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ

Related Video