Chikkamagalur : ಪತ್ನಿಯನ್ನ ಹುಡುಕಿಕೊಡಿ, ನೊಂದ ಪತಿಯ ಅಳಲು ಕೇಳೋರ್ಯಾರು.!?

- ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿದ! - ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ! - ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಪತ್ನಿ ನಾಪತ್ತೆ  - ಪತ್ನಿಯನ್ನ ಹುಡುಕಿಕೊಡಿ ಅಂತಾ ನೊಂದ ಪತಿಯ ಅಳಲು
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಡಿ. 10): ಆತ ಜೀವನದಲ್ಲಿ ಮದುವೆಯೇ (Marriage) ಆಗಬಾರದು ಅಂದುಕೊಂಡಿದ್ದ. ಈ ಮಧ್ಯೆ ತನ್ನ ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿಬಿಟ್ಟಿದ್ದ. ಹಾಗೇ ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ..! ಇದನ್ನ ಪ್ರಶ್ನೆ ಮಾಡುತ್ತಲೇ ಆಕೆ ಗಂಡನ ಮನೆಯಿಂದ ಕಾಲ್ಕಿತ್ತಿದ್ದಾಳೆ. ಹಾಗಂತ ಸುಮ್ನೆ ಎಸ್ಕೇಪ್ ಆಗಿಲ್ಲ, ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಹೋಗಿದ್ದಾಳೆ, ಪತ್ನಿಯನ್ನ ಹುಡುಕಿಕೊಡಿ ಅಂತಾ ಅಳಲು ತೋಡಿಕೊಂಡಿದ್ದಾನೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಎರಡು ವರ್ಷಗಳ ಹಿಂದೆ ಈ ವ್ಯಕ್ತಿ ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಉಷಾ ಎಂಬಾಕೆಯನ್ನ ಮದ್ವೆಯಾಗಿದ್ರು. ಮದುವೆಯಾದ ಮೇಲೆ ಆಕೆಯ ಒಂದೊಂದೇ ಕಥೆಗಳು ಷಡಕ್ಷರಿಗೆ ಗೊತ್ತಾಗಿದೆ. ಆಕೆಯನ್ನ ಪ್ರಶ್ನೆ ಮಾಡಿದ್ದಕ್ಕೆ ಒಂದು ವಾರದ ಹಿಂದೆ ಷಡಕ್ಷರಿ ಮನೆಯಿಂದ ಉಷಾ ನಾಪತ್ತೆ ಆಗಿದ್ದಾಳೆ. ಅಲ್ಲದೇ ಹೀಗೆ ಮನೆಯಿಂದ ಹೋಗ್ಬೇಕಾದ್ರೆ ಚಿನ್ನ, ಹಣವನ್ನ ಎಗರಿಸಿಕೊಂಡು ಹೋಗಿದ್ದಾಳೆ!

ಪ್ರತಿದಿನ ಹುಡುಕಾಡ ನಡೆಸುತ್ತಿದ್ರೂ ಆಕೆಯ ಸುಳಿವೇ ಪತ್ತೆಯಾಗಿಲ್ಲ. ನನಗೆ ಮೋಸ ಹೋದ್ರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಅದೇ ಒಬ್ಬ ಮಹಿಳೆಗೆ ಮೋಸ ಆಗಿದ್ರೆ ಎಲ್ಲರೂ ಆಕೆಯ ಬೆನ್ನಿಗೆ ನಿಲ್ಲುತ್ತಿದ್ರು. ಇದೀಗ ನನಗೆ ಸಾಥ್ ಕೊಡುವವರು ಯಾರು ಇಲ್ಲ ಅಂತಾ ಷಡಕ್ಷರಿ ನೋವು ತೋಡಿಕೊಂಡಿದ್ದಾನೆ. 

Related Video