Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! 

Share this Video
  • FB
  • Linkdin
  • Whatsapp

ಶಿವಮೊಗ್ಗ (ಡಿ. 25): ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು, ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! ಹೌದು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ ಮಲೆನಾಡಿನ ನಡುಮನೆ ಶಿವಮೊಗ್ಗ (Shivamogga) ಥಂಡಾ... ಥಂಡಾ... ಕೂಲ್..... ಕೂಲ್... ಆಗಿದೆ. ಕನಿಷ್ಠ 13 ಡಿಗ್ರಿಯಿಂದ 16 ಡಿಗ್ರಿಯವರೆಗೆ ಇರುವ ತಾಪಮಾನ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Impact: ಗೃಹ ಸಚಿವರ ತವರಲ್ಲಿ ಲಂಚದ ಹಾವಳಿ, ಆಗುಂಬೆ ಪೊಲೀಸ್ ಠಾಣೆಯ ಎಎಸ್‌ಐ ಸಸ್ಪೆಂಡ್

ಮಲೆನಾಡಿನಲ್ಲಿ ಚಮು ಚುಮು ಚಳಿ (Winter) ಆರಂಭಗೊಂಡಿದೆ . ಡಿಸೆಂಬರ್ ಮೊದಲನೇ ವಾರದ ವರೆಗೆ ಹಿಂಗಾರು ಮಳೆ ಸುರಿದಿದ್ದು ಈಗ ಶಿವಮೊಗ್ಗದಲ್ಲಿ (Shivamogga) ಸಂಪೂರ್ಣ ಚಳಿ ಆವರಿಸಿಕೊಂಡಿದೆ . ಮಧ್ಯಾಹ್ನ 11 ಗಂಟೆಯಾದರೂ ಚಳಿಯ ಅನುಭವ ಹೋಗುತ್ತಿಲ್ಲ. ಎಳೆ ಬಿಸಿಲಿಗೆ ಮೈವೊಡ್ಡಬೇಕೆಂಬ ಅನುಭವ ಹುಟ್ಟುವುದು ಸಹಜ . ಬೆಳಿಗ್ಗಿನ ಜಾವದ ಹೊತ್ತಿಗೆ 13 ರಿಂದ 16 ಡಿಗ್ರಿ ತಲುಪಿದೆ . ಬೆಳಗ್ಗಿನ ಜಾವ ಬಿದ್ದ ಹಿಮದ ಹತ್ತಿರದಲ್ಲಿರುವ ಮನುಷ್ಯ ಕಾಣದಂತೆ ಅನುಭವ ಮೂಡಿಸಿದೆ .

ಈ ರೀತಿಯ ಚಳಿ ಮುಂದಿನ 15 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಚಳಿಗೆ ಬೆಚ್ಚಗಿನ ಸ್ವೆಟರ್, ಮಫ್ಲರ್, ಉಲ್ಲನ್, ಟೋಪಿ ಏನೆಲ್ಲಾ ಹಾಕಿದರೂ ಹೊರಗಡೆ ಇರುವವರಿಗೆ ಚಳಿಗೆ ಮುದುರಿಕೊಳ್ಳುವಂತಾಗಿದೆ . ಈ ಚಳಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು , ವಾಕಿಂಗ್ ಮಾಡುವವರ ಪರದಾಟ ಹೇಳ ತೀರದು. ಬಿಸಿ ಬಿಸಿ ಟೀ, ಕಾಫಿ ಕುಡಿದರೂ ಮೈ ಬಿಸಿಯಾಗದೇ ನಡುಗುವಂತಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಬಿಟ್ಟು ಬಿಟ್ಟು ಮಳೆ ಸುರಿದು ಇದೀಗ ಡಿಸೆಂಬರ್ ನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ಜನತೆ ಮಾತ್ರ ಪ್ರಕೃತಿಯ ಈ ವೈಚಿತ್ರ್ಯಕ್ಕೆ ಹೈರಾಣಾಗಿದ್ದಾರೆ

Related Video